Header Ads
Header Ads
Breaking News

ಸರಪಾಡಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಪ್ರಥಮ ವರ್ಷದ ಅಂಗವಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವು ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.ತಿರುಪತಿ ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬ್ರಹ್ಮ ಶ್ರೀ ವಿ ಗಣೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ತಿರುಪತಿಯ ಪುರೋಹಿತ ವೃಂದದ ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಕೈಂಕರ್ಯಗಳು ನಡೆಯಿತು.ತಿರುಪತಿಯಿಂದ ಆಗಮಿಸಿದ ಶ್ರೀ ತಿರುಪತಿ ವೆಂಕಟರಮಣ ಮತ್ತು ಶ್ರೀ ದೇವಿ, ಭೂ ದೇವಿಯ ಮೂರ್ತಿಯನ್ನು ಬೆಳಗ್ಗೆ ಪೂಪಾಡಿಕಟ್ಟೆ – ಪೆರ್ಲ, ಬೀಯಪಾದೆ – ಎಕ್ಕಡೇಲು – ಸರಪಾಡಿ ಮಾರ್ಗವಾಗಿ ಬ್ಯಾಂಡ್, ವಾದ್ಯ, ಕೊಂಬು, ಚೆಂಡೆ ವಾದನದಲ್ಲಿ ಮೆರವಣಿಗೆ ಮೂಲಕ ಸರಪಾಡಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಧಾರ್ಮಿಕ ಪೂಜಾ ಕಾರ್ಯಕ್ರಮ ಆರಂಭಗೊಂಡಿತು. ಗುರು ಪ್ರಾರ್ಥನೆ, ಸಭಾ ಪ್ರಾರ್ಥನೆ, ದೀಪಾರಾಧನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಪ್ರಾರ್ಥನೆ ಬಳಿಕ ಶ್ರೀನಿವಾಸ ಕಲ್ಯಾಣದ ವಿವಿಧ ಹಂತಗಳನ್ನು ಶ್ಲೋಕಾರ್ಥ ಸಹಿತವಾಗಿ ನಡೆಸಲಾಯಿತು. ನಿತ್ಯ ಷೋಡಶೋಪಚಾರ ಪೂಜೆ, ಕಲ್ಯಾಣ ಕಥಾ ಶ್ರವಣ, ವಾಂಗೆ ನಿಶ್ಚಯ, ಪರೋಪಕಾರ ಪೂಜೆ, ವಧು ಪರ್ಶ ನಿರೀಷಣೆ, ಕನ್ಯಾದಾನ, ಮಾಂಗಲ್ಯ ಪೂಜೆ, ಅಕ್ಷತಾರೋಪಣೆ, ವಿನೋದ ಸೇವೆ, ಮೌಲಿಕಾರೋಪಣೆ, ವಸ್ತ್ರ ಸಮರ್ಪಣೆ, ಅಷ್ಟಾವಧಾನ ಸೇವೆಯೊಂದಿಗೆ ಮಹಾಮಂಗಳಾರತಿ ನಡೆದು ತೀರ್ಥ ಪ್ರಸಾದ ವಿತರಿಸಲಾಯಿತು. ಸಂಚಾಲಕ ಸಂಚಾಲಕ ರವೀಂದ್ರ ಟಿ.ಸಿ. ಮಾವಿನಕಟ್ಟೆ ಮತ್ತು ವಿಶ್ವನಾಥ ಗೌಡ ದಂಪತಿಗಳು ಸೇವಾ ಕರ್ತೃಗಳಾಗಿ ಕಲ್ಯಾಣೋತ್ಸ ನಡೆಸಿಕೊಟ್ಟರು. ಇದೇ ವೇಳೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೇ.ಮೂ.ಶಿವ ಪ್ರಸಾದ ಐತಾಳ ಆರಮನೆ ಅವರ ನೇತೃತ್ವದಲ್ಲಿ ದ್ವಾದಶ ನಾಳೀಕೆರ ಯಾಗ ನಡೆಯಿತು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಧಿಗಳು ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಎಚ್. ಶಂಕರ ನಾರಾಯಣ ರಾವ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಸ್. ನರಸಿಂಹ ಐತಾಳ್, ಅರಮನೆ, ಅಧ್ಯಕ್ಷ ಎಸ್. ದಯಾನಂದ ಐತಾಳ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಗೌರವಾಧ್ಯಕ್ಷ, ಜಿ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಅಧ್ಯಕ್ಷ ಗಣೇಶ್ ಪೈ ಸರಪಾಡಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ನಾರಾಯಣ ಶೆಟ್ಟಿ ಹೊಳ್ಳರಗುತ್ತು, ಪುಷ್ಪರಾಜ್ ಬಂಗೇರ ಹಲ್ಲಂಗಾರು,ಧನಂಜಯ ಶೆಟ್ಟಿ ನಾಡಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *