Header Ads
Header Ads
Breaking News

ಸರೋಶ್ ಇನ್ಸ್‌ಸ್ಟಿಟ್ಯೂಟ್ ವತಿಯಿಂದ ಆಹಾರೋತ್ಸವ

ಮಂಗಳೂರಿನಲ್ಲಿರುವ ಸರೋಶ್ ಇನ್ಸ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಎಡ್‌ಮಿನಿಸ್ಟ್ರೇಶನ್ ವತಿಯಿಂದ ಆಹಾರೋತ್ಸವ ಅರೋಮ ವಿಜೃಂಭಣೆಯಿಂದ ನಡೆಯಿತು. ಆಹಾರೋತ್ಸವದ ಜೊತೆಗೆ ಮ್ಯೂಸಿಕ್ ಮತ್ತು ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇನ್ನಷ್ಟು ಮೆರಗು ನೀಡಿತ್ತು.

ಮಂಗಳೂರಿನ ಕೋಡಿಕಲ್‌ನಲ್ಲಿರುವ ಸರೋಶ್ ಇನ್ಸ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಎಡ್‌ಮಿನಿಸ್ಟ್ರೇಶನ್ ನವರು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅರೋಮ ಎಂಬ ಆಹಾರೋತ್ಸವವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸರೋಶ್ ಇನ್ಸ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಎಡ್‌ಮಿನಿಸ್ಟ್ರೇಶನ್ ಫ್ರಿನ್ಸಿಪಾಲ್ ಅಮರ್ ಜೆಡ್ ಚೆರಿಯನ್ ಅವರು ಆಹೋರೋತ್ಸವದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಆನಂತರ ತೀರ್ಪುಗಾರರಾಗಿ ಆಗಮಿಸಿದ ಸುಮಂತ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ತಯಾರಿಸಿದ್ದು ಒಂದಕ್ಕೊಂದು ಫುಡ್ ಟೇಸ್ಟಿಯಾಗಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಆಹಾರೋತ್ಸವದಲ್ಲಿ ವಿದ್ಯಾರ್ಥಿಗಳೇ ವಿವಿಧ ಆಹಾರಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಸಸ್ಯಹಾರಿ ಮತ್ತು ಮಾಂಸಹಾರಿ ಅಲ್ಲದೆ ಪಾನಿಯಾಗಳನ್ನು ಸ್ಥಳದಲ್ಲೇ ತಯಾರಿಸಿ ವಿತರಣೆ ಮಾಡಿದರು. ವಿದ್ಯಾರ್ಥಿಗಳ ಶ್ರಮಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ಆಹಾರೋತ್ಸವದಲ್ಲಿ ಮನೋರಂಜನಾ ಕಾರ್ಯಕ್ರಮ ಇನ್ನಷ್ಟು ಮೆರಗು ನೀಡಿತ್ತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಡೊನಾಲ್ಡ್ ಡಿಸೋಜಾ, ಕಾರ್ಯಕ್ರಮದ ಆಯೋಜಕರಾದ ಗೌರವ್ ಶೆಟ್ಟಿಗಾರ್, ಗ್ಲಾಡೆನ್ ಡಿಸೋಜಾ, ಡಾ. ಡಿ.ಕೆ. ಶೆಟ್ಟಿ, ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಸಿನು, ವಿಜಯ್, ಸುಮಂತ್ ಶೆಟ್ಟಿ ಸಹಕರಿಸಿದರು.
ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *