Header Ads
Breaking News

ಸರ್ಕಾರದಿಂದ ದಸರಾ ರಜೆ ಕಡಿತದ ಆದೇಶ ವಾಪಸ್: ಸಚಿವ ಖಾದರ್

ಮಳೆ ಹಿನ್ನೆಲೆಯಲ್ಲಿ ಈ ಬಾರಿಯ ಮಂಗಳೂರು ದಸರಾ ರಜೆ ಕಡಿತಗೊಳಿಸಿದ್ದ ಸರ್ಕಾರ ತನ್ನ ಆದೇಶ ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ

.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ದಸರಾ ರಜೆಯಲ್ಲಿ ಯಾವುದೇ ಕಡಿತ ಇಲ್ಲ. ಶಿಕ್ಷಣ ಇಲಾಖೆಯ ಎಂದಿನ ತೀರ್ಮಾನದಂತೆ ರಜೆ ನೀಡಲಾಗುವುದು. ಮಳೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ನೀಡಿದಕ್ಕಾಗಿ ದಸರಾ ರಜೆ ಕಡಿತ ಮಾಡಲಾಗಿತ್ತು. ಆದ್ರೆ ಈ ಕುರಿತಾಗಿ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ ರಜೆ ಕಡಿತ ನಿರ್ಧಾರವನ್ನು ವಾಪಾಸ್ ಪಡೆದಿದೆ ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

Related posts

Leave a Reply