Header Ads
Breaking News

ಸರ್ಕಾರದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಮಾರಾಟ ನಿಷೇಧ : ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿಕೆ

ಸರ್ಕಾರದ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಮಾರಾಟ, ಸಂಗ್ರಹವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಬಟ್ಟೆಯ ಪ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಹಾಕಬಹುದು ಆದ್ರೆ ಇದಕ್ಕೆ ನಗರಸಭೆಯಿಂದಲೇ ಜಾಗ ಗುರುತಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದ ಎಲ್ಲೆಡೆ ಛಿತ್ತಿ ಪತ್ರಗಳನ್ನು ಅಂಟಿಸಲಾಗಿದ್ದು ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಇವೆಲ್ಲದಕ್ಕೂ ಸ್ಥಳ ಮತ್ತು ಶುಲ್ಕ ನಿಗದಿ ಮಾಡಲು ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ. ಅನಧಿಕೃತವಾಗಿ ಪ್ಲೆಕ್ಸ್ ಪ್ರಿಂಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಗೋಡೆಗಳಿಗೆ ಬ್ಯಾನರ್ ರೀತಿ ಪೇಂಟಿಂಗ್ ಮಾಡೂವುದು ನಿಷೇಧಿಸಲಾಗಿದೆ. ಸಾರಿಗೆ ಸಂಸ್ಥೆಗಳು ಪ್ಲಾಸ್ಟಿಕ್ ವಸ್ತುಗಳನ್ನು ಜಿಲ್ಲೆಗೆ ತರಬಾರದು ಎಂದು ತಿಳಿಸಿದರು. ಸೆ.27ರಿಂದ ಆಗಸ್ಟ್ 2 ರತನಕ ಹೋಟೇಲ್ ವಾಣಿಜ್ಯ ಮಳಿಗೆಗಳಿಗೆ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯುತ್ತಿದ್ದೇವೆ. ನಂತರ ದಂಡ ಹಾಕುವ ಪ್ರಕ್ರೀಯೆ ಆರಂಭವಾಗಲಿದೆ. ಮೊದಲ ಬಾರಿ 1 ಸಾವಿರ, 2ನೇ ಸಲ 2 ಸಾವಿರ 3ನೇ ಬಾರಿ ಅಂಗಡಿ ಲೈಸೆನ್ಸ್ ರದ್ದು ಮಾಡಿ ಪ್ರಕರಣ ದಾಖಲಿಸುತ್ತೇವೆ ಅಂತ ಎಚ್ಚರಿಕೆ ನೀಡಿದರು.

Related posts

Leave a Reply

Your email address will not be published. Required fields are marked *