Header Ads
Breaking News

ಸರ್ಕಾರದ ವಿರುದ್ಧವೇ ಸಚಿವ ಈಶ್ವರಪ್ಪ ಪತ್ರ; ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ಏನು..?

ರಾಜ್ಯ ಸರ್ಕಾರದ ವಿರುದ್ಧವೇ ಸಚಿವ ಕೆ ಎಸ್ ಈಶ್ವರಪ್ಪ ಪತ್ರ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕಿಯಿಸಿದ್ದಾರೆ. ಈಗಾಗಲೇ ಈಶ್ವರಪ್ಪ ಹತ್ತಿರ ಮಾತನಾಡಿದ್ದೇನೆ. ಸಮಸ್ಯೆ ಆಗಿದ್ದರೆ ಅದನ್ನು ಮಾತನಾಡಿ ಬಗೆಹರಿಸುತ್ತೇವೆ. ಈಶ್ವರಪ್ಪ ಈ ವಿಚಾರವನ್ನು ಮಾತನಾಡಿ ಬಗೆಹರಿಸಬಹುದಿತ್ತು. ಆದರೆ ಅವರು ನೇರ ಪತ್ರವನ್ನು ಬರೆದಿದ್ದಾರೆ.ರಾಜ್ಯಪಾಲರ ಜೊತೆಗೇನೇ ನನಗೂ ಪತ್ರ ಕಳುಹಿಸಿದ್ದಾರೆ. ಈ ವಿಚಾರ ಸುಖಾಂತ್ಯವಾಗಿ ಪರಿಹಾರಗೊಳ್ಳುತ್ತದೆ. ಎರಡು ದಿನದೊಳಗೆ ನಾನೇ ಬಗೆಹರಿಸುತ್ತೇನೆ ಎಂದು ಅವ್ರು ಹೇಳಿದರು. ಇನ್ನು ಈಶ್ವರಪ್ಪ,ಯತ್ನಾಳ್ ನಡೆಯನ್ನು ಒಂದೇ ಅಂತಾ ಪರಿಗಣಿಸೋಕೆ ಆಗಲ್ಲ. ಈಶ್ವರಪ್ಪ ಸಚಿವರಾಗಿದ್ದಾರೆ,ಅನುಭವಿಗಳಾಗಿದ್ದಾರೆ ಅವರು ಪತ್ರ ಬರೆದಿದ್ದಾರೆ. ಯತ್ನಾಳ್ ಶಾಸಕನಾಗಿ ನೇರವಾಗಿ ಮಾತನಾಡಿದ್ದಾರೆ. ಯತ್ನಾಳ್ ವಿರುದ್ಧ ಈಗಾಗಲೇ ನೊಟೀಸ್ ಕೊಟ್ಟಿದ್ದೇವೆ ಅದಕ್ಕೆ ಉತ್ತರಿಸಬೇಕಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ನಳಿನ್ ಉತ್ತರಿಸಿದ್ರು. ಇನ್ನು ಕಾಂಗ್ರೆಸ್ ಈ ಕುರಿತು ಸರ್ಕಾರವ ಬಗ್ಗೆ ಮಾತನಾಡುವ ಹಕ್ಕು ಹೊಂದಿಲ್ಲ. ಕಾಂಗ್ರೆಸ್ ಒಳಗೆಯೇ ಜಗಳಗಳು ಜೋರಾಗಿದೆ.ಸಿದ್ಧರಾಮಯ್ಯ ಮತ್ತು ಡಿಕೆಶಿವಕುಮಾರ್ ಜಗಳ ಬೀದಿಗೆ ಬಿದ್ದಿದೆ.ಒಂದೆಡೆ ಸಿದ್ಧರಾಮಯ್ಯ ನಾನೇ ಮುಂದಿನ ಸಿಎಂ ಅಂತಾ ಟ್ವೀಟ್ ಮಾಡುತ್ತಾರೆ.ಇನ್ನೊಂದೆಡೆ ಡಿಕೆ ಶಿವಕುಮಾರ್ ಇದಕ್ಕೆ ವಿರೋಧ ಮಾಡುತ್ತಾರೆ. ಉಪಚುನಾವಣೆಗೆ ನಡುವಲ್ಲೇ ಕಾಂಗ್ರೆಸ್ ಗೆ ಬೆಂಕಿ ಬಿದ್ದಿದೆ. ನಮ್ಮಲ್ಲಿ ಸ್ವಲ್ಪ ಮಟ್ಟಿನ ಹೊಗೆ ಕಾಣಿಸಿಕೊಳ್ಳುತ್ತಿದೆ ಎಂದು ಅವು ಹೇಳಿದರು. ಇನ್ನು ಉಪಚುನಾಚಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವ್ರು ವಿಶ್ವಾಸ ವ್ಯಕ್ತಪಡಿಸಿದರು.

Related posts

Leave a Reply

Your email address will not be published. Required fields are marked *