Header Ads
Header Ads
Breaking News

ಸರ್ಕಾರಿ ಆಸ್ಪತ್ರೆಯಲ್ಲಿ ‘ಬೇಯದ ಮೊಟ್ಟೆ’. ಹೀಗಾದರೆ ಹೇಗೆ – ರೋಗಿಗಳ ಅಳಲು.

ಪುತ್ತೂರು : ‘ನಮಗೆ ತಿನ್ನಲು ಬೇಯದ ಹಸಿ ಮೊಟ್ಟೆ ಕೊಟ್ಟರು. ಮೇಲಧಿಕಾರಿಗಳಾದ ವೈದ್ಯರ ಗಮನಕ್ಕೆ ತಂದಾಗ ನಿರ್ಲಕ್ಷ್ಯ ವಹಿಸಿದರು. ಹೀಗಾದರೆ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಲಿ, ಬಡವರಿಗಾಗಿರುವ ಸರ್ಕಾರದ ವ್ಯವಸ್ಥೆಯೇ ಹೀಗಾದರೆ ಹೇಗೆ ….?ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಊಟಕ್ಕೆ ನೀಡಲಾಗಿದ್ದ ಮೊಟ್ಟೆಗಳ ಪೈಕಿ ಕೆಲವು ರೋಗಿಗಳಿಗೆ ಬೇಯದ ಹಸಿ ಮೊಟ್ಟೆ ಸಿಕ್ಕಿತ್ತು. ಅದನ್ನು ಪ್ರದರ್ಶಿಸಿ ರೋಗಿಗಳು ಹೀಗೆಂದು ಅಳವತ್ತುಕೊಂಡರು.

ಈ ವಿಚಾರ ತಿಳಿದು ಆಸ್ಪತ್ರೆಗೆ ಆಗಮಿಸಿದ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮತ್ತು ಮಹಮ್ಮದ್ ರಫೀಕ್ ದರ್ಬೆ ಅವರು ಬೇಯದ ಮೊಟ್ಟೆ ವಿಚಾರದಲ್ಲಿ ರೋಗಿಗಳಿಂದ ಮಾಹಿತಿ ಪಡೆದುಕೊಂಡು ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಚರ್ಚಿಸಿದರು.90ಮಂದಿ ರೋಗಿಗಳ ಪೈಕಿ ಮೂವರಿಗೆ ಈ ರೀತಿ ಬೇಯದ ಮೊಟ್ಟೆ ಸಿಕ್ಕಿದೆ. ಏನೋ ಸಣ್ಣ ತಪ್ಪಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವೀಣಾ ಅವರು ತಿಳಿಸಿದಾಗ ಇಂತಹ ಸಮಸ್ಯೆ ಇನ್ನು ಮುಂದೆ ಆಗದಂತೆ ಎಚ್ಚರ ವಹಿಸಬೇಕು, ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

Related posts

Leave a Reply