Header Ads
Header Ads
Breaking News

ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಕೆಜಿಎಂಒ ನೇತೃತ್ವದಲ್ಲಿ ಪ್ರತಿಭಟನೆ ಕಾಸರಗೋಡಿನಲ್ಲಿ ಸಂಕಷ್ಠದಲ್ಲಿ ರೋಗಿಗಳು

ಕಾಸರಗೋಡು: ಹೊಸತಗಿ ಆರಂಭಿಸಲಾದ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಸಂಜೆ ತನಕ ಹೊರ ರೋಗಿ ವಿಭಾಗ ಆರಂಭಿಸಿರುವುದನ್ನು ಪ್ರತಿಭಟಿಸಿ ರಾಜ್ಯ ಸರಕಾರಿ ಆಸ್ಪತ್ರೆಗಳ ವೈದ್ಯರುಗಳು ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.ವೈದ್ಯರುಗಳ ಸಂಘಟನೆಯಾದ ಕೆ ಜಿ ಎಂ ಒ ದ ನೇತೃತ್ವದಲ್ಲಿ ಮುಷ್ಕರವನ್ನು ನಡೆಸಲಾಗುತ್ತಿದೆ.
ತುರ್ತು ಚಿಕಿತ್ಸಾ ವಿಭಾಗ ಹಾಗೂ ಹೊರ ರೋಗಿಗಳ ವಿಭಾಗವನ್ನು ಹೊರತುಪಡಿಸಿ ಉಳಿದ ಉಳಿದ ಎಲ್ಲಾ ವಿಭಾಗಕ್ಕೂ ವೈದ್ಯರುಗಳು ಹಾಜರಾಗದೆ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯ ಜಿಲ್ಲಾಸ್ಪತ್ರೆ, ಜನರಲ್ ಆಸ್ಪತ್ರೆ, ಆರ್ಯವೇದ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅದೇ ರೀತಿ ಎಲ್ಲಾ ಸಾಮೂಹಿಕ ಆರೋಗ್ಯ ಕೇಂದ್ರಗಳ 188 ವೈದ್ಯರುಗಳು ಈ ಮುಷ್ಕರದಲ್ಲಿ ಬಾಗಿಯಾಗಿದ್ದಾರೆ.ಆದರೆ ರಾಜ್ಯದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ವೈದ್ಯರುಗಳು ಎಂದಿನಂತೆ ಸೇವೆ ನಡೆಸುತಿದ್ದಾರೆ.ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೆಸರುಗಳನ್ನು ಬದಲಾಯಿಸಿ ಕುಟುಂಬ ಆರೋಗ್ಯ ಕೇಂದ್ರವೆಂದು ಬದಲಾಯಿಸಿದ ಬಳಿಕ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ತನಕ ಇದ್ದ ಸೇವೆಯನ್ನು ಸಂಜೆ 6 ರ ತನಕ ವಿಸ್ತರಿಸಲಾಗಿದ್ದರೂ ಅಗತ್ಯದ ಸಿಬ್ಬಂದಿಗಳನ್ನು ಹಾಗೂ ವೈದ್ಯರುಗಳನ್ನು ನೇಮಿಸಿಲ್ಲವೆಂದು ಪ್ರತಿಭಟಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿರುವುದಾಗಿ ಕೆಜಿಎಂಒ ಸಂಘಟನೆ ತಿಳಿಸಿದೆ.
ವರದಿ: ರೆಹಮಾನ್ ಮಂಜೇಶ್ವರ