Header Ads
Header Ads
Breaking News

ಸರ್ಕಾರಿ ಕಾಮಗಾರಿಗಳಲ್ಲಿ ಸಂಸದರು, ಶಾಸಕರ ಫೋಟೋ ಬಳಕೆ ಸರಿಯಲ್ಲ: ಭೋಜೆಗೌಡ ಹೇಳಿಕೆ

ಸಂಸದರ ನಿಧಿ, ಶಾಸಕರ ನಿಧಿ ಬಳಸಿ ಮಾಡಿದ ಕಾಮಗಾರಿಗಳಲ್ಲಿ ಅವರ ಪೊಟೋ ಬಳಕೆ ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು, ಸಂಸದರು, ರಾಜ್ಯ ಸಂಸದರ ನಿಧಿ ಎಂದು ಮಾತ್ರ ಬಳಸಬೇಕು. ಅದರಲ್ಲಿ ಪೊಟೋ ಬಳಸಲು ಅವರು ಸ್ವಂತ ನಿಧಿಯಿಂದ ಕೊಟ್ಟಿದ್ದರ?ವಿಧಾನಸೌಧ ಅಧಿಕಾರಿಗೆ ಇದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ನ್ಯಾಯಲಯದಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು. 

      ನ್ಯಾಯಲಯವು 24 ಗಂಟೆಗಳೊಳಗೆ ಬೆಂಗಳೂರಿನ ಗುಂಡಿ ಮುಚ್ಚಲು ಬಿಬಿಎಂಪಿಗೆ ಆದೇಶ ನೀಡಿರುವುದು ಸ್ವಾಗಾತಾರ್ಹ. ಆದರೆ ೨೪ ಗಂಟೆಯಲ್ಲಿ ಗುಣಮಟ್ಟದ ಕಾಮಗಾರಿ ಸಾಧ್ಯವ ಎಂದು ಚಿಂತಿಸಬೇಕಾಗಿದೆ. ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಮಾಡಿ ಏನು ಪ್ರಯೋಜನ ಎಂದು ಭೋಜೇಗೌಡರು ಪ್ರಶ್ನಿಸಿದರು. ಇನ್ನು, ಕನ್ನಡ ಭಾಷೆ ಕಲಿಕೆ ಬಗ್ಗೆ ಅಂಧಾಬಿಮಾನ ಇರಬಾರದು. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎಂದು ಚಿಂತಿಸಬೇಕು. ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಮಾತಾಡಲಿ. ಅವರ ಮಕ್ಕಳು ಸರ್ಕಾರಿ ಶಾಲೆಗೆ ಕಲಿಸದಿದ್ದರೆ ಅವರಿಗೆ ಮಾತಾಡುವ ನೈತಿಕತೆ ಇಲ್ಲ ಎಂದು ಭೋಜೇಗೌಡರು ಹೇಳಿದರು. 

Related posts

Leave a Reply