Header Ads
Header Ads
Breaking News

ಸರ್ಕಾರಿ ಶಾಲಾ ಪಕ್ಕ ಬಾರ್‌ಗೆ ಶಾಸಕರ ಬೆಂಬಲ, ಪಡುಬಿದ್ರಿಯ ವಿವಿಧ ಸಂಘಟನೆಗಳ ಆಕ್ರೋಶ

ಸರ್ಕಾರಿ ಶಾಲಾ ಕಾಲೇಜು ಪಕ್ಕದಲ್ಲೇ ಕಾಂಗ್ರೆಸ್ ಮುಂಖಂಡರೋರ್ವರು ನಿರ್ಮಿಸಲು ಉದ್ದೇಶಿಸಿರುವ ಬಾರ್‌ಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಬೆಂಬಲವಾಗಿ ನಿಂತಿದ್ದು, ತಕ್ಷಣವೇ ಶಾಸಕರು ಹಿಂದೆ ಸರಿಯಬೇಕು, ಸಂಬಂಧಪಟ್ಟ ಇಲಾಖೆ ಬಾರ್ ನಡೆಸುವುದಕ್ಕೆ ಪರವಾನಿಗೆ ನೀಡಬಾರದು ಎಂಬುದಾಗಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಆಗ್ರಹಿಸಿದ್ದಾರೆ.
ಕಾಪು ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘಟನೆ, ದಸಂಸ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರಿ ಹೆದ್ದಾರಿ ಅಗಲೀಕರಣ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಪಡುಬಿದ್ರಿ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ವೈ. ಸುಧೀರ್ ಕುಮಾರ್ ಮಾಲಕತ್ವದ ನವರಂಗ್ ಬಾರ್ ತೆರವಾಗುತ್ತಿದ್ದು, ಇದೀಗ ಅದೇ ಬಾರನ್ನು ಸ್ಥಳೀಯ ಸರ್ಕಾರಿ ಬೋರ್ಡ್ ಶಾಲಾ ಸಮೀಪಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು.

Related posts

Leave a Reply