Header Ads
Breaking News

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಣದ ಕನಸು ಕಂಡಿದ್ದ ಮಕ್ಕಳಿಗೆ ಶಾಕ್..!

 ಸರ್ಕಾರಿ ಶಾಲೆಯ ಮಕ್ಕಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಬೇಕು ಅನ್ನೋ ಉದ್ದೇಶದಿಂದ ಈ ಬಾರಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸೆಡ್ಡು ಹೊಡೆದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದ್ರೆ ಇಂಗ್ಲೀಷ್ ಮೀಡಿಯಂ ದಾಖಲಾತಿಗೆ ಸೂಚನೆ ನೀಡಿದ್ದ ಸರ್ಕಾರ ಇದೀಗ ದಿಢೀರ್ ಆಗಿ ಹೊರಡಿಸಿರೋ ಆದೇಶವೊಂದು ಮಕ್ಕಳ ಭವಿಷ್ಯವನ್ನೇ ಅತಂತ್ರವಾಗಿಸಿದೆ. ಅಷ್ಟಕ್ಕೂ ಸರ್ಕಾರ ಹೊರಡಿಸಿರೋ ಆ ಆದೇಶ ಯಾವುದು? ಇದ್ರಿಂದ ಮಕ್ಕಳಿಗಾಗಿರೋ ಸಮಸ್ಯೆ ಆದ್ರೂ ಏನು ಅನ್ನೋದ್ರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ…

ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಗೆ ತುತ್ತಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕನ್ನಡ ಮಾಧ್ಯಮ ಶಿಕ್ಷಣಗಳಿಂದ ಮಕ್ಕಳು ದೂರವಾಗ್ತಿದ್ದು, ಲಕ್ಷ ಲಕ್ಷ ಪೋಷಕರು ಮಕ್ಕಳನ್ನ ಖಾಸಗಿ ಇಂಗ್ಲೀಷ್ ಮೀಡಿಯಂ ಶಾಲೆಗಳತ್ತ ಕಳುಹಿಸ್ತಿದಾರೆ. ಆದ್ರೆ ಈ ಬಾರಿ ಇದಕ್ಕೆ ಬ್ರೇಕ್ ಹಾಕೋಕೆ ಮುಂದಾದ ರಾಜ್ಯ ಸರ್ಕಾರದ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ನೀಡಿ ಆದೇಶ ನೀಡಿತ್ತು. ಅದ್ರಂತೆ ಕಳೆದ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಗಿದ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ದಾಖಲಾತಿ ಮಾಡಿಸಿಕೊಳ್ಳಲಿ ಅಂತ ಆದೇಶ ನೀಡಲಾಗಿತ್ತು.

ಆದ್ರೆ ಕೆಲ ದಿನಗಳ ಹಿಂದೆ ಸರ್ಕಾರ ಮತ್ತೊಂದು ಆದೇಶ ಹೊರಡಿಸಿರೋದ್ರಿಂದ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ದೇರಳಕಟ್ಟೆ ಸರ್ಕಾರಿ ಶಾಲೆಯ ಬರೋಬ್ಬರಿ 98 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸರ್ಕಾರ ಆಂಗ್ಲ ಮಾಧ್ಯಮ ಪ್ರವೇಶಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ದೇರಳಕಟ್ಟೆ ಶಾಲೆಯಲ್ಲಿ ದಾಖಲಾತಿ ಆರಂಭವಾಗಿದ್ದು, ಬರೋಬ್ಬರಿ 128 ಮಂದಿ ಮಕ್ಕಳು ಆಂಗ್ಲ ಶಿಕ್ಷಣಕ್ಕೆ ದಾಖಲಾಗಿದ್ದಾರೆ. ಆದ್ರೆ ಇದೀಗ ಸರ್ಕಾರ ನೂತನ ಆದೇಶ ಹೊರಡಿಸಿ ದಾಖಲಾತಿಗೆ ಮಿತಿ ನಿಗದಿ ಮಾಡಿದೆ. ಅದ್ರಂತೆ ಕೇವಲ 30 ಮಕ್ಕಳನ್ನಷ್ಟೇ ಆಂಗ್ಲ ಮಾಧ್ಯಮಕ್ಕೆ ಧಾಖಲು ಮಾಡುವಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಹಾಗೊಂದು ವೇಳೆ ಹೆಚ್ಚಿನ ಮಕ್ಕಳ ದಾಖಲಾತಿ ಆಗಿದ್ದಲ್ಲಿ ಲಾಟರಿ ಚೀಟಿ ಎತ್ತುವ ಮೂಲಕ 30 ಮಕ್ಕಳನ್ನು ಆಯ್ಕೆ ಮಾಢಿ ಉಳಿದ ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಮುಂದುವರೆಸುವಂತೆ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಆದ್ರೆ ಸರ್ಕಾರ ಹೊರಡಿಸಿರೋ ದಿಢೀರ್ ಆದೇಶ ದೇರಳಕಟ್ಟೆ ಶಾಲೆಗೆ ದಾಖಲಾಗಿರೋ ಮಕ್ಕಳ ಪೋಷಕರು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರಕ್ಕೆ ಈ ಸಮಸ್ಯೆ ಗಮನಕ್ಕೆ ತಂದಿರೋ ಪೋಷಕರು ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರು ತಕ್ಷಣ ಆದೇಶ ಹಿಂಪಡೆಯಲು ಆಗ್ರಹಿಸಿದ್ದಾರೆ. ಇಲ್ಲದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ಧಾರೆ.

ಅಸಲಿಗೆ ಕಳೆದ ಎರಡು ವಾರಗಳ ಅವಧಿಯಲ್ಲಿ ದೇರಳಕಟ್ಟೆ ಶಾಲೆಯ ಆಡಳಿತ ಮಂಡಳಿ ಸರ್ಕಾರದ ಸೂಚನೆಯಂತೆ ಈ ಬಗ್ಗೆ ಪ್ರಚಾರ ಮಾಡಿತ್ತು. ಇದನ್ನ ಅರಿತ ಮಕ್ಕಳ ಪೋಷಕರು ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸೋ ಬದಲು ದೇರಳಕಟ್ಟೆ ಸರ್ಕಾರಿ ಶಾಲೆಗೆ ತಂದು ಸೇರಿಸಿದ್ದಾರೆ. ಈ ವೇಳೆ ನಿರಂತರ ದಾಖಲಾತಿಯನ್ನ ಗಮನಿಸಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ಧಾರೆ. ಈ ವೇಳೆ ಶಿಕ್ಷಣಾಧಿಕಾರಿ ದಾಖಲಾತಿಗೆ ಮಿತಿ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ ಮೇಲೆ ಮತ್ತಷ್ಟು ದಾಖಲಾತಿ ನಡೆದು ಸದ್ಯ ಬರೋಬ್ಬರಿ 128 ಮಕ್ಕಳು ಶಾಲೆಗೆ ಧಾಖಲಾಗಿದ್ದಾರೆ. ಆದ್ರೆ ಶಾಲೆ ಆರಂಭವಾದ ಬಳಿಕ ಜೂನ 01ರಂದು ಸರ್ಕಾರ ಹೊಸ ಆದೇಶವೊಂಧನ್ನ ಹೊರಡಿಸಿದ್ದು, ಅದ್ರಲ್ಲಿ ದಾಖಲಾತಿಗೆ ಮಿತಿ ನಿಗದಿ ಮಾಡಿದೆ. 30 ಮಕ್ಕಳಿಗಷ್ಟೇ ಇಂಗ್ಲೀಷ್ ಮಾಧ್ಯಮ ಶಿಕ್ಷಣ ಅಂತ ಆದೇಶದಲ್ಲಿ ಹೇಳಲಾಗಿದೆ. ಅಲ್ಲದೇ ಲಾಟರಿ ಎತ್ತಿ ಮಕ್ಕಳ ಆಯ್ಕೆಗೆ ಸೂಚನೆ ನೀಡಿರೋದು ಸರ್ಕಾರದ ಎಡವಟ್ಟಿಗೆ ಉದಾಹಣೆಯಂತಾಗಿದೆ. ಇದ್ರಿಂದಾಗಿ ದೇರಳಕಟ್ಟೆ ಶಾಲೆಯ 98 ಮಕ್ಕಳು ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಖಾಶಗಿ ಕಾಲೇಜಿಗೆ ಸೇರುವ ಮಕ್ಕಳನ್ನ ಕೂಡ ಪೋಷಕರು ಸರ್ಕಾರಿ ಶಾಲೆಗೆ ತಂದು ಸೇರಿಸಿದ್ದು, ಸರ್ಕಾರ ಹೊರಡಿಸಿರೋ ಹೊಸ ಆದೇಶ ತಲೆನೋವಾಗಿ ಪರಿಣಮಿಸಿದೆ. ಇನ್ನು ಈ ಶಾಲೆ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲೇ ಇದ್ದು, ಸಚಿವರ ಗಮನಕ್ಕೂ ತರಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತನಾಢಿಸ ಸಮಸ್ಯೆ ಬಗೆ ಹರಿಸೋ ಭರವಸೆಯನ್ನ ಸಚಿವರು ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಸರ್ಕಾರದ ಈ ನಡೆ ಸದ್ಯ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆಯಾಗಿ ಮಕ್ಕಳಿಗೆ ಇಂಗ್ಲೀಷ್ ಮೀಡಿಯಂ ಆಸೆ ತೋರಿಸಿರೋ ಸರ್ಕಾರ ದಾಖಲಾತಿ ಮಿತಿ ನಿಗದಿ ಮಾಡಿರೋದು ಅನುಮಾನಕ್ಕೆ ಕಾರಣವಾಗಿದೆ. ಅದ್ರಲ್ಲೂ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಈ ಆದೇಶ ಕೊಟ್ಟಿರೋದು ಅನುಮಾನಳಿಗೆ ಕಾರಣವಾಗಿದೆ. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ರೀತಿ ಆದೇಶ ಹೊರಡಿಸಿತೇ ಅನ್ನೋ ಸಂಶಯವೂ ಕಾಡಿದೆ. ಏನೇ ಅದ್ರೂ ಸರ್ಕಾರ ಈ ಆದೇಶ ವಾಪಾಸ್ ಪಡೆದು ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರು ಮತ್ತು ಮೂಲಭೂತ ಸೌಕರ್ಯ ಒದಗಿಸಿ ಇಂಗ್ಲೀಷ್ ಶಿಕ್ಷಣ ನೀಡಬೇಕಿದೆ.

Related posts

Leave a Reply

Your email address will not be published. Required fields are marked *