Header Ads
Header Ads
Breaking News

ಸರ್ದಾರ್ ವಲ್ಲಭಬಾಯ್ ಪಾಟೇಲ್ ಜನ್ಮದಿನಾಚರಣೆ ಹಿನ್ನೆಲೆ: ಪಡುಬಿದ್ರೆಯಲ್ಲಿ ಕಾಲ್ನಡಿಗೆ ಜಾಥಾ

ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿ ಹೊಂದಿದ್ದ ಸರದಾರ್ ವಲ್ಲಭಬಾಯ್ ಪಟೇಲ್ ಅವರ ಹುಟ್ಟು ಹಬ್ಬದ ಅಂಗವಾಗಿ ಪಡುಬಿದ್ರಿ ಪೊಲೀಸ್ ಠಾಣಾ ನೇತೃತ್ವದಲ್ಲಿ, ಪಡುಬಿದ್ರಿ ಬೋರ್ಡ್ ಹೈಸ್ಕೂಲ್ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು-ಶಿಕ್ಷಕರು ಹಾಗೂ ಪಡುಬಿದ್ರಿಯ ನಾಗರಿಕರ ಕೂಡುವಿಕೆಯಿಂದ ಕಾಲ್ನಡಿಗೆ ಜಾಥ ನಡೆಯಿತು.ಜಾಥವನ್ನು ಉದ್ಘಾಟಿಸಿ ಮಾತನಾಡಿದ ಪಡುಬಿದ್ರಿ ಪಿಎಸ್‍ಐ ಸತೀಷ್, ಹತ್ತು ಹಲವಾರು ವಿಭಜನೆಗೊಂಡ ನಮ್ಮದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರದಾರ್ ಮಲ್ಲಭಬಾಯ್ ಪಾಟೇಲ್ ಸಂಷ್ಕರಣಾ ದಿನಾಚರಣೆಯ ಅಂಗವಾಗಿ, ಈ ಜಾಥವನ್ನು ಹಮ್ಮಿಕೊಂಡಿದ್ದು, ಈ ಜಾಥವು ಪಡುಬಿದ್ರಿ ಸರ್ಕಾರಿ ಬೋರ್ಡ್ ಶಾಲಾ ಮೈದಾನದಿಂದ ಹೊರಟು ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊನೆಗೊಳ್ಳಲಿದೆ. ಈ ಜಾಥಕ್ಕೆ ಸ್ಥಳೀಯ ಶಾಲಾ ಕಾಲೇಜಿನ ವಿಧ್ಯಾರ್ಥಿಗಳು ಸಹಿತ ಸ್ಥಳೀಯ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದರು.ಈ ಜಾಥದಲ್ಲಿ ಪ್ರಮುಖವಾಗಿ ಹೆಜಮಾಡಿ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ದಯಾನಂದ್ ಹೆಜಮಾಡಿ, ಶಬ್ಬೀರ್ ಸಹೇಜ್, ಸಚ್ಚಿನ್ ನಾಯಕ್, ಶೇಖರ್ ಹೆಜಮಾಡಿ, ಕೌಸರ್ ಪಡುಬಿದ್ರಿ, ಸತೀಶ್ ಗುಡ್ಡೆಚ್ಚಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply