Breaking News

ಸಲಿಂಗಿ ಬೆಂಬಲದ ಅಯರ್‌ಲ್ಯಾಂಡ್ ಮಂತ್ರಿ, ಭಾರತ ಮೂಲದ ಲಿಯೋ ವಾರಡ್ಕರ್ ಪ್ರಧಾನಿಯಾಗಿ ಆಯ್ಕೆ

ಭಾರತೀಯ ಮೂಲದ ಸಲಿಂಗಿ ಸಚಿವ ಲಿಯೋ ವಾರಡ್ಕರ್ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕ್ಯಾಥೊಲಿಕ್ ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿ ಎಂಬ ಖ್ಯಾತಿ ಗಳಿಸಿದ್ದಾರೆ.
ಸಾಮಾಜಿಕ ಭದ್ರತೆ ಖಾತೆ ನಿರ್ವಹಿಸುತ್ತಿದ್ದ ೩೮ ಹರೆಯದ ವಾರಡ್ಕರ್ ಅವರು ಗೃಹ ಖಾತೆ ಸಚಿವ ಸಿಮನ್ ಕೊವೆನೇ ಅವರನ್ನು ಭಾರೀ ಅಂತರದಿಂದ ಸೋಲಿಸುವ ಮೂಲಕ ನೂತನ ಪ್ರಧಾನಿಯಾಗಿ ದಾಖಲೆ ಬರೆದಿದ್ದಾರೆ. ವಾರಡ್ಕರ್ ಆಯ್ಕೆ ಐರ್ಲೆಂಡ್ನಲ್ಲಿ ಆದ ಸಾಮಾಜಿಕ ಬದಲಾವಣೆಯನ್ನು ಗುರುತಿಸುತ್ತದೆ.
೨೦೧೫ರಲ್ಲಿ ಸಲಿಂಗಿಗಳ ವಿವಾಹ ಕಾಯಿದೆ ತರಲು ಮತ ಚಲಾಯಿಸಿದ್ದ ಅವರು ಸಲಿಂಗಕಾಮಿ ಚಟುವಟಿಕೆಯನ್ನು ಕಾನೂನು ಬದ್ಧ ಗೊಳಿಸುವಲ್ಲಿ ಧ್ವನಿಯೆತ್ತಿದ ಯುರೋಪಿಯನ್ ಒಕ್ಕೂಟದ ಸದಸ್ಯರಲ್ಲಿ ಒಬ್ಬರು. ಹಾಲಿ ಪ್ರಧಾನಿ ಎಂಡಾ ಕೆನ್ನಿ ಅವರ ೬ ವರ್ಷಗಳ ಅಧಿಕಾರ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಚುನಾವಣೆ ನಡೆದಿದ್ದು, ಪಕ್ಷದ ೬೫% ಪ್ರತಿನಿಧಿಗಳು ವಾರಡ್ಕರ್ ಬೆಂಬಲಿಸಿದ್ದರು.

Related posts

Leave a Reply