Breaking News

ಸಸಿಹಿತ್ಲುನಲ್ಲಿ ನಡೆದ ದೇಶೀಯ ಸರ್ಫಿಂಗ್, ತುಳುನಾಡಿನ ತನ್ವಿ ಮಹಿಳಾ ಮುಕ್ತ ಚಾಂಪಿಯನ್

ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ನ ತನ್ವಿ ಜಗದೀಶ್ ಮತ್ತು ಪುದುಚೇರಿಯ ಕಲಿ‌ಅಲೈ ಸರ್ಫಿಂಗ್ ಸ್ಕೂಲ್ನ ಸುಹಾಸಿನಿ ಡಾಮಿನ್ ಅವರು ಮುಕ್ತಾಯವಾದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಮಹಿಳೆಯರ ಮುಕ್ತ ಸ್ಟ್ಯಾಂಡ್ ಅಪ್ ಪೆಡಲಿಂಗ್ ಮತ್ತು ಸರ್ಫಿಂಗ್ನಲ್ಲಿ ಪ್ರಶಸ್ತಿ ಗೆದ್ದರು.
ಸಸಿಹಿತ್ಲು ಬೀಚ್ನಲ್ಲಿ ಕೆನರಾ ಸರ್ಫಿಂಗ್ ಅಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫಿಂಗ್ ಕ್ಲಬ್ ಸಹಯೋಗದಲ್ಲಿ ಈ ಚಾಂಪಿಯನ್ಷಿಪ್ ಆಯೋಜಿಸಲಾಗಿತ್ತು. ಮಹಿಳೆಯರ ಸ್ಟ್ಯಾಂಡ್ ಅಪ್ ಪೆಡಲಿಂಗ್ನಲ್ಲಿ ಅಮೋಘ ಸಾಮರ್ಥ್ಯ ಮೆರೆದ ತನ್ವಿ ಜಗದೀಶ್ ಅವರು ಪ್ರಶಸ್ತಿ ಗೆದ್ದರು. ಇದೇ ವಿಭಾಗದಲ್ಲಿ ತಮಿಳುನಾಡಿನ ವಿಲಾಸಿನಿ ಸುಂದರ್ ಹಾಗೂ ಹರ್ಷಿತಾ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರು.
ಸುಹಾಸಿನಿ ಮೊದಲ ಬಾರಿಗೆ ಸರ್ಫಿಂಗ್ನಲ್ಲಿ ಪಾಲ್ಗೊಂಡಿದ್ದ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು. ರಷ್ಯಾದ ಓಲ್ಗಾ ಕೊಸೆಂಕೊ ಅವರು ದ್ವಿತೀಯ ಮತ್ತು ಮಣಿಪಾಲದ ಇಶಿತಾ ಮಾಳವೀಯ ತೃತೀಯ ಸ್ಥಾನ ಪಡೆದರು. ಶನಿವಾರ ನಡೆದಿದ್ದ ಹೀಟ್ಸ್ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಸರ್ಫರ್ ತನ್ವಿ ಜಗದೀಶ್ ಹಾಗೂ ಕಳೆದ ಬಾರಿಯ ಚಾಂಪಿಯನ್ ಸಿಂಚನಾ ಗೌಡ ಫೈನಲ್ಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು.
ಪುರುಷರ ಮುಕ್ತ ವಿಭಾಗದ ಫೈನಲ್ನಲ್ಲಿ ಮಾಲ್ಡೀವ್ಸ್ ಸರ್ಫರ್ ಅಮ್ಮಾಡೇ ಗೆದ್ದರು., ತಮಿಳುನಾಡಿನ ಪ್ರಸ್ಟಿಲ್ ಫ್ರೀಯಾನ್ ಹಾಗೂ ಮಣಿಕಂಠನ್ ಅಪ್ಪು ನಂತರದ ಎರಡು ಸ್ಥಾನ ಪಡೆದುಕೊಂಡರು. ಪುರುಷರ ಮುಕ್ತ ವಿಭಾಗದ ಸ್ಟ್ಯಾಂಡ್ ಅಪ್ ಪೆಡಲಿಂಗ್ನಲ್ಲಿ ಚೆನ್ನೈನ ಶೇಖರ್ ಪಿಟ್ಚೆ ಮೊದಲ ಸ್ಥಾನ ಪಡೆದರು, ವಿಘ್ನೇಶ ವಿಜಯ ಹಾಗೂ ಕಿಶೋರ್ ಕುಮಾರ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಮಾಸ್ಟರ್ಸ್ ವಿಭಾಗದಲ್ಲಿ ವೆಂಕಟ ಮೊದಲಿಗರಾದರು. ಮೂರ್ತಿ ಹಾಗೂ ಸಂದೀಪ್ ಸ್ಯಾಮುಯೆಲ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ೨೩ರಿಂದ ೩೦ ವರ್ಷದ ಪುರುಷರ ವಿಭಾಗದಲ್ಲಿ ಶೇಖರ್ ಪಿಟ್ಚೆ ಮೊದಲ ಸ್ಥಾನ, ಆಂಟೋನಿ ದ್ವಿತೀಯ, ಧರಣೀಶ್ ಸೆಲ್ವಕುಮಾರ್ ತೃತೀಯ ಸ್ಥಾನ ಪಡೆದರು.
೧೭ರಿಂದ ೨೨ ವರ್ಷ ವಯಸ್ಸಿನ ಕಿರಿಯರ ವಿಭಾಗದಲ್ಲಿ ಚಾಂಪಿಯನ್ ಸ್ಥಾನ ಕೋವಳಂ ಸರ್ಫರ್ ರಮೇಶ್ ಅವರ ಪಾಲಾಯಿತು. ಪಿ. ಸೂರ್ಯ ಹಾಗೂ ರಾಹುಲ್ ಗೋವಿಂದ್ ಕ್ರಮವಾಗಿ ನಂತರದ ಎರಡು ಸ್ಥಾನ ಪಡೆದರು. ೧೬ ವರ್ಷ ವಯೋಮಿತಿ ವಿಭಾಗದಲ್ಲಿ ಕೋವಳಂನ ಅಜೇಶ್ ಅಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸಂತೋಷ್ ಶಾಂತಕುಮಾರ್ ಹಾಗೂ ಶಿವರಾಜ ಬಾಬು ಎರಡು ಹಾಗೂ ಮೂರನೇ ಸ್ಥಾನ ಪಡೆದರು. ೧೪ ವರ್ಷ ವಯೋಮಿತಿ ವಿಭಾಗದಲ್ಲಿ ಅಖಿಲನ್ ಪ್ರಥಮ, ಸುಬ್ರಮಣಿ ಹಾಗೂ ಅಬ್ದುಲ್ ಕೊನೆಯ ಎರಡು ಸ್ಥಾನ ಪಡೆದರು.

Related posts

Leave a Reply