Header Ads
Header Ads
Breaking News

ಸಸಿಹಿತ್ಲು ಕದಿಕೆ ಪ್ರದೇಶದಲ್ಲಿ ಮೀನುಗಾರಿಕಾ ಜಟ್ಟಿ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಅಭಯಚಂದ್ರ ಜೈನ್

ಹಳೆಯಂಗಡಿಯ ಸಸಿಹಿತ್ಲು ಕದಿಕೆ ಪ್ರದೇಶದಲ್ಲಿ 7 ಕೋಟಿ ರೂಪಾಯಿ ವೆಚ್ಚದ ಸೇತುವೆ, 4.50 ಕೋಟಿ ರೂಪಾಯಿ ವೆಚ್ಚದ ಮೀನುಗಾರಿಕಾ ಜಟ್ಟಿ, ಮತ್ತು ನೂತನ ರಸ್ತೆಯ ಉದ್ಘಟನೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಉದ್ಘಟಿಸಿದರು.

ನಂತರ ಮಾತನಡಿದ ಅವರು ಸಸಿಹಿತ್ಲುಗೆ ಸೇತುವೆ ಆಗಬೇಕು ಎಂಬುದು ಇಲ್ಲಿನ ಜನರ ಬಹು ದಿನಗಳ ಬೇಡಿಕೆಯಾಗಿತ್ತು ಅದು ಈಗ ಸಿದ್ದರಾಮಯ್ಯ ಸರಕಾರದಿಂದ ನನಸ್ಸಾಗಿಗೆ, ನುಡಿದಂತೆ ನಡೆದ ಸಿದ್ದರಾಮಯ್ಯ ಸುಮಾರು 400 ಕೋಟಿ ರೂಪಾಯಿ ನಮ್ಮ ರಸ್ತೆಗೆ ಒದಗಿಸಿದ್ದಾರೆ, ಸಸಿಹಿತ್ಲುನಿಂದ ಚಿತ್ರಾಪುಗೆ 2 ಕೋಟಿ ರೂಪಾಯಿ ರಸ್ತೆ ನಿರ್ಮಾಣವಾಗಿದೆ, ಚಿತ್ರಾಪು ಕೊಳಚಿ ಕಂಬಳದವರೆಗೆ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದ್ದು ಚುನಾವಣೆ ನಂತರ ಇದರ ಶಿಲಾನ್ಯಾಸ ನೆರವೇರಿಸುತ್ತೇವೆ, ಈ ಸೇತುವೆಯಿಂದ ಬಪ್ಪನಾಡುವರೆಗಿನ ಭಕ್ತರಿಗೆ ನೇರವಾಗಿ ಸಸಿಹಿತ್ಲುಗೆ ಬೇಟಿ ನೀಡಲು ಸುಲಭವಾಗಲಿದೆ ಎಂದರು.ಈ ಸಂದರ್ಭ ಸಸಿಹಿತ್ಲುವಿನ ಗೋಕುಲ್ ದಾಸ್ ಅವರಿಗೆ ಮನೆ ದುರಸ್ತಿಗೆ ಶಾಸಕ ಕೆ ಅಭಯಚಂದ್ರ ಜ್ಯೆನ್ ರವರ ಶಿಫಾರಸ್ಸಿನ ಮೇರೆಗೆ ಮಂಜೂರಾದ ರೂ 30, 000 ದ ಚೆಕ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಸಸಿಹಿತ್ಲು ಸಾರಂತಾಯ ಗರೋಡಿಯ ಕಾಂತು ಲಕ್ಕಣ ಯಾನೇ ಯಾದವ ಪೂಜಾರಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ನಿಶಾಂತ್ ಮುಲ್ಕಿ