Header Ads
Header Ads
Breaking News

ಸಸಿಹಿತ್ಲು ಬೀಚ್‍ನಲ್ಲಿ 2 ದಿನಗಳ ಕಾಲ ನಡೆದ ಕುಸ್ತಿಹಬ್ಬಕ್ಕೆ ಅದ್ಧೂರಿ ತೆರೆ

 

ಮಂಗಳೂರು: ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಪುರಸ್ಕøತ ಸಸಿಹಿತ್ಲುವಿನ ಶ್ರೀ ಆಚಿಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ, ಕರ್ನಾಟಕ ಕುಸ್ತಿ ಸಂಘ, ಮತ್ತು ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಸಹಭಾಗಿತ್ವದಲ್ಲಿ ಮಂಗಳೂರಿನ ಸಸಿಹಿತ್ಲುವಿನ ಕಡಲಕಿನಾರೆಯಲ್ಲಿ ನಡೆದ ರಾಜ್ಯಮಟ್ಟದ ಹಾಗೂ ದ.ಕ. ಜಿಲ್ಲಾ ಮಟ್ಟದ ತುಳುನಾಡು ಕೇಸರಿ, ತುಳುಕುಮಾರ್, ತುಳುನಾಡು ಕುವರಿ ಮತ್ತು ಮಾಸ್ಟರ್ ಶಿವಾಜಿ ಕುಸ್ತಿ ಸ್ಪರ್ಧೆಗೆ ಅದ್ಧೂರಿ ತೆರೆ ಬಿತ್ತು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಹಿಂದೆ ದ.ಕ. ಜಿಲ್ಲೆಯಲ್ಲಿ ಕುಸ್ತಿಗೆ ಹೆಚ್ಚಿನ ಮಹತ್ವ ಇತ್ತು. ಬಳಿಕ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದ್ದರೂ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಯತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಯುವಕರಲ್ಲಿ ಕುಸ್ತಿಯತ್ತ ಆಕರ್ಷಣೆ ಮೂಡಿಸುತ್ತಿರುವ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ವಿ4 ನ್ಯೂಸ್‍ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರದ ಸಾಧಕರಾದ ಬಾಲಕೃಷ್ಣ ಕುಂದರ್, ವಾಸುದೇವ ಸಾಲ್ಯಾನ್, ಐಕಳ ಹರೀಶ್ ಶೆಟ್ಟಿ, ಜಯ ಕೋಟ್ಯಾನ್, ಕಸ್ಟಂ ಇನ್‍ಸ್ಪೆಕ್ಟರ್  ಮತ್ತು ಖ್ಯಾತ ಆತ್ಲೆಟಿಕ್ ಕೋಚ್ ದಿನೇಶ್ ಕುಂದರ್ ಅವರನ್ನು ಶಾಲುಹೊದಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಎರಡು ದಿನಗಳ ಕಾಲ ಅದ್ಧೂರಿಯಾಗಿ ಕುಸ್ತಿ ಪಂದ್ಯಾಟ ನೆರವೇqರಿದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಕುಸ್ತಿ ಪಟುಗಳು ತಮ್ಮ ಸಾಮಥ್ರ್ಯವನ್ನು ತೋರ್ಪಡಿಸಿದ್ದಾರೆ. ಈ ಮೂಲಕ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯು ಉತ್ತಮವಾಗಿ ಪಂದ್ಯಾಟವನ್ನು ಆಯೋಜಿಸಿದೆ ಎಂದು ಹೇಳಿದರು.

ಬಳಿಕ ಕುಸ್ತಿಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ಪ್ರಶಸ್ತಿ, ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಡಿಪಿಎಸ್‍ಪಿ ಕಾರ್‍ಸ್ಟ್ರೀಟ್‍ನ ಅರ್ಪಿತಾ  ತುಳುಕುಮಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಮಾಸ್ಟರ್ ಶಿವಾಜಿ ಟೈಟಲ್‍ನ್ನು  ಶ್ರೀ ದುರ್ಗಾಪರಮೇಶ್ವರಿ ಚಿತ್ರಾಪುರ ತಂಡದÀ ಪ್ರವೀಣ್ ಮುಡಿಗೇರಿಸಿಕೊಂಡರು. ತುಳುನಾಡ ಕುಮಾರ ಪ್ರಶಸ್ತಿಯನ್ನು ಶಿವಾಜಿ ಫಿಸಿಕಲ್ಸ್‍ನ ಸುಪ್ರೀತ್ ಪಡೆದುಕೊಂಡರೆ ಡಿಪಿ ಚಿತ್ರಾಪುರ್ ತಂಡದ ವೇಲ್‍ರಾಜ್ ದ್ವಿತೀಯ ಸ್ಥಾನ ಗಳಿಸಿದರು. ತುಳುನಾಡ ಕೇಸರಿ ಪ್ರಶಸ್ತಿಯನ್ನು ಆಂಜನೇಯ ಸಸಿಹಿತ್ಲು ತಂಡದ ರಾಕೇಶ್ ಪುತ್ರನ್ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಶಿವಾಜಿ ಫಿಸಿಕಲ್ಸ್‍ನ ನಟರಾಜ್ ಪಡೆದುಕೊಂಡರು. ಪುರುಷರ ಚಾಂಪಿಯನ್ ತಂಡವಾಗಿ ಶ್ರೀ ದುರ್ಗಾಪರಮೇಶ್ವರಿ ಚಿತ್ರಾಪುರವು ಮೂಡಿಬಂದರೆ, ಮಹಿಳೆಯರ ಚಾಂಪಿಯನ್ ಟೀಂ ಆಗಿ ಕಾರ್‍ಸ್ಟ್ರೀಟ್ ಫಸ್ಟ್‍ಗ್ರೇಡ್ ಕಾಲೇಜು ಮೂಡಿಬಂತು.

ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಶ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಡೋಜ ಜಿ. ಶಂಕರ್, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈನ ದಿವ್ಯ ಲಾಜಿಸ್ಟಿಕ್ಸ್ ಗ್ರೂಪ್‍ನ ಎಂ.ಡಿ. ವೇದಪ್ರಕಾಶ್ ಶ್ರಿಯಾನ್, ಉದ್ಯಮಿ ಅನಿಲ್ ಸಾಲ್ಯಾನ್, ಮಂಗಳೂರು ವಿವಿ ಹಣಕಾಸು ಅಧಿಕಾರಿ ಡಾ. ದಯಾನಂದ್ ನಾಯ್ಕ್, ಓಲಾ ಮುಂಭೈನ ಸಹಾಯಕ ನಿರ್ದೇಶಕ ದಯಾರಾಜ್ ಸಿ ಕುಂದರ್, ಶರಣ್ಯ ಬೋಟ್ ಮಾಲಕ ಶರತ್ ಎಲ್ ಕರ್ಕೇರ, ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಹಳೆಯಂಗಡಿ ಡಿಸಿಎ ಬ್ಯಾಂಕ್‍ನ ಸತೀಶ್ ಭಟ್, ಮಂಗಳೂರು ವಿವಿ ರಿಜಿಸ್ಟ್ರಾರ್ ಎ.ಎಂ. ಖಾನ್, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದದ ಅಧ್ಯಕ್ಷ ಪ್ರಕಾಶ್, ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ದೀಪಕ್ ಸುವರ್ಣ, ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಮುಂಬೈ ಘಟಕ ಸಂಚಾಲಕ ಅನಿಲ್ ಕುಮಾರ್, ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್ ಕುಮಾರ್, ಉಪಾಧ್ಯಕ್ಷ ಸಂತೋಶ್ ಸಸಿಹಿತ್ಲು, ಸಂಘಟನಾ ಕಾರ್ಯದರ್ಶಿ ಶೋಭೇಂದ್ರ ಸಸಿಹಿತ್ಲು, ಆಂಜನೇಯ ಕ್ರಿಕೆಟರ್ಸ್ ಅಧ್ಯಕ್ಷ ರಿತೇಶ್ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply