Header Ads
Breaking News

ಸಸಿಹಿತ್ಲು ಬೀಚ್ ಅಭಿವೃದ್ಧಿ ಯೋಜನೆಯಿಂದ ಸ್ಥಳೀಯರಿಗೆ ಆತಂಕ ಬೇಡ : ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ

ಮೂಲ್ಕಿ: ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶ ಇರುವ ಸಸಿಹಿತ್ಲು ಬೀಚ್ ಅಭಿವೃದ್ಧಿಗೆ 10 ಕೊ.ರೂ. ಯೋಜನೆಯನ್ನು ರೂಪಿಸಲಾಗುತ್ತಿದೆ. ಜಿಲ್ಲಾಡಳಿತ, ಸರ್ಕಾರ, ಪ್ರವಾಸೋದ್ಯಮ ಇಲಾಖೆಯ ಮೂಲಕ ಸರ್ಫಿಂಗ್ ಪ್ರದೇಶವನ್ನಾಗಿ ರೂಪಿಸುವ ಯೋಜನೆಯಲ್ಲಿ ಸ್ಥಳೀಯ ಮೀನುಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡೇ ಯೋಜನೆ ರೂಪಿಸಲಾಗುತ್ತಿದೆ ಇದರಿಂದ ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನೀವಾಸ ಪೂಜಾರಿ ಹೇಳಿದರು.

ಅವರು ಮೂಲ್ಕಿ ಬಳಿಯ ಸಸಿಹಿತ್ಲು ಬೀಚ್‍ನಲ್ಲಿ ಕಾರ್ಯಗತಗೊಳ್ಳಲಿರುವ ಯೋಜನೆಗಾಗಿ ಸ್ಥಳ ಸಮೀಕ್ಷೆಯನ್ನು ಶಾಸಕರ ಹಾಗೂ ಜಿಲ್ಲಾಧಿಕಾರಿ, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು. ಕಡಲಿನ ಒತ್ತಡ ಹೆಚ್ಚಾಗಿ ಕೊರತೆ ಉಂಟಾಗುತ್ತದೆ ಎಂಬ ಕಾರಣಕ್ಕೆ 4.15 ಕೊ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ರಚನೆ, ಸರ್ಫಿಂಗ್‍ನ ಪ್ರದೇಶಕ್ಕಾಗಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಯೋಜನೆಗಳು ಕಾರ್ಯಗತಗೊಳ್ಳಲಿದೆ. ಪ್ರವಾಸೋದ್ಯಮಕ್ಕೆ ಆಕರ್ಷಣೆ ಮಾಡುವ ಉದ್ದೇಶದೊಂದಿಗೆ ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆ ರೂಪಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‍ಕುಮಾರ್ ಬೊಳ್ಳೂರು , ತಾಲ್ಲೂಕು ಪಂಚಾಯಿತಿ ಸದಸ್ಯ ಜೀವನ್‍ಪ್ರಕಾಶ್, ಮೀನುಗಾರಿಕಾ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು, ಯುವಜನ ಸೇವಾ ಇಲಾಖೆಯ ಅಧಿಕಾರಿ ವಿನೋದ್ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಮಾಹಿತಿ ನೀಡಿ, ಸಮಸ್ಯೆಗಳಿಗೆ ಸ್ಪಂದಿಸಿ ಯೋಜನೆಯನ್ನು ರೂಪಿಸಿರಿ ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಪಿಸಿಎ ಬ್ಯಾಂಕ್‍ನ ಅಧ್ಯಕ್ಷ ಸತೀಶ್ ಭಟ್, ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ಹಳೆಯಂಗಡಿ ಪಂಚಾಯಿತಿಯ ಮಾಜಿ ಸದಸ್ಯರಾದ ವಿನೋದ್‍ಕುಮಾರ್ ಕೊಳುವೈಲು, ಆಶೋಕ್ ಬಂಗೇರ ಮತ್ತಿತರರು ಇದ್ದರು.

Related posts

Leave a Reply

Your email address will not be published. Required fields are marked *