Header Ads
Breaking News

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಹಿರಿಯ ಸಾಹಿತಿ ಶ್ರೀ ಅಶೋಕ್ ಎಲ್ ಪೂಜಾರಿಯವರಿಗೆ ಸನ್ಮಾನ

ಮಂಗಳೂರು : ಕಾರ್ಯಕ್ರಮದಲ್ಲಿ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರು ಹಾಗೂ ಕೋಶಾಧಿಕಾರಿಯಾಗಿರುವ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಜೊತೆಗೆ ಮುಖ್ಯ ಅಥಿತಿಯಾಗಿ ಸಾರಂತಾಯ ಗರೋಡಿಯ ಗುರಿಕಾರರು ಆಗಿರುವ ದಯಾನಂದ ಎಸ್ ಅಂಚನ್ ಉಪಸ್ಥಿತರಿದ್ದರು. ಡಮರುಗ ತಂಡದ ಸಾಹಿತಿ ಜಿ.ಎಸ್ ಗುರುಪುರ, ಗಾಯಕಿ ಚೈತ್ರ ಕಲ್ಲಡ್ಕ, ಸಂಕಲನಕಾರ ಪ್ರಸಾದ್ ಕೊಳಂಬೆ ಉಪಸ್ಥಿತರಿದ್ದರು. ಜೊತೆಗೆ ಖ್ಯಾತ ಗಾಯಕಿ ಮಂಜುಶ್ರೀ ಕಾರ್ತಿಕೇಯ ಕುಳಾಯಿ ಹಾಗೂ ಶಕುಂತಲಾ ಪ್ರಕಾಶ್ ಕುಳಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಮಾರಂಭದ ಕೇಂದ್ರ ಬಿಂದುವಾಗಿರುವ ಶ್ರೀ ಅಶೋಕ್ ಎಲ್ ಪೂಜಾರಿ ಉಳ್ಯ ಗುತ್ತು ಪಂಜ ಕೊಯಿಕುಡೆ (ಮುಂಬೈ) ಇವರಿಗೆ ಕ್ಷೇತ್ರದ ಪರವಾಗಿ ತುಳುನಾಡ ಸಾಹಿತ್ಯ ರತ್ನ ಬಿರುದನ್ನು ನೀಡಿ ಸಂಭ್ರಮದಿಂದ ಸನ್ಮಾನಿಸಲಾಯಿತು ಇದೆ ಹೊತ್ತಿನಲ್ಲಿ ಇವರ ಸಾಹಿತ್ಯ ಗೊಂಚಿಲು ಪುಸ್ತಕ ಹಾಗೂ ಚೈತ್ರಾ ಕಲ್ಲಡ್ಕ ಹಾಡಿರುವ ಅಮ್ಮ ಭಗವತಿ ಎಂಬ ಧ್ವನಿ ಸುರುಳಿಯು ಲೋಕಾರ್ಪಣೆ ಆಯಿತು. ನಂತರ ಸನ್ಮಾನವನ್ನು ಸ್ವೀಕರಿಸಿದ ಶ್ರೀ ಅಶೋಕ್ ಪೂಜಾರಿಯವರು ತಮ್ಮ ಮನದಾಳದ ಮಾತುಗಳನ್ನು ಸಭಿಕರಲ್ಲಿ ಹಂಚಿಕೊಂಡರು. ಭಾಸ್ಕರ್ ಸಾಲ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

Leave a Reply

Your email address will not be published. Required fields are marked *