Header Ads
Header Ads
Header Ads
Breaking News

ಸಹಕಾರಿ ಕ್ಷೇತ್ರ ಹರಿಯುವ ನೀರಿನಂತಿದ್ದ ವ್ಯವಹಾರ ಅಭಿವೃದ್ಧಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿಕೆ

 

ಸಹಕಾರಿ ಕ್ಷೇತ್ರ ನಿತ್ಯ ನಿರಂತರ ಹರಿಯುವ ನೀರಿನಂತಿದ್ದರೆ ಮಾತ್ರ ವ್ಯವಹಾರ ಅಭಿವೃದ್ಧಿ ಪಥದಲ್ಲಿ ಸಾಗಬಹುದು. ಪಾರಮಾರ್ಥಿಕತೆಯೊಂದಿಗೆ ಆರ್ಥಿಕತೆ ಬೆಳೆದಾಗ ಹೆಚ್ಚು ಭದ್ರತೆಯಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ವಿಟ್ಲದ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ2016-17ನೇ ವರ್ಷದ ಮಹಾಸಭೆಯಲ್ಲಿ ಆಶೀರ್ವಚನ ನೀಡಿದರು.
ನಿರ್ಮಲ ಮನಸ್ಸಿನ ಗ್ರಾಹಕರ ವ್ಯವಹಾರ ಸಂಘದ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವುದು ಸಾಲ ಪಡೆದವರ ಕರ್ತವ್ಯವಾಗಿದೆ. ಒಡಿಯೂರು ಸಹಕಾರಿ ಸಂಘದ ಮೂಲಕ ಗ್ರಾಮ ವಿಕಾಸ ಯೋಜನೆಯೂ ಪ್ರಗತಿ ಕಂಡಿದೆ. ನೂರಾರು ಉದ್ಯೋಗ ಸೃಷ್ಟಿ, ಸಾಮಾಜಿಕ ಸೇವೆಯೊಂದಿಗೆ ಸಂಘವು ಬೆಳೆಯುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ತಿಳಿಸಿದರು.
ಸಂಘದ ಗೌರವ ಮಾರ್ಗದರ್ಶಕಿ ಸಾಧ್ವೀ ಶ್ರೀ ಮಾತಾನಂದಮಯಿ, ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷ ತಾರಾನಾಥ ಕೊಟ್ಟಾರಿ, ಮಹಾಪ್ರಬಂಧಕ ಭಾಸ್ಕರ್ ಮಂಗಲ್ಪಾಡಿ, ಲೆಕ್ಕಪರಿಶೋಧಕರಾದ ಶಾಂತಾರಾಮ ಶೆಟ್ಟಿ, ಶಿವಕುಮಾರ್ ಕೆ, ಎಜಿಎಂ ತಾರಾನಾಥ ಶೆಟ್ಟಿ, ತಾಂತ್ರಿಕ ಇಂಜಿನಿಯರ್ ಜಗದೀಶ್, ನಿರ್ದೇಶಕರಾದ ಜಯಂತ್ ಕೊಟ್ಯಾನ್, ಪುರುಷೋತ್ತಮ್ ಎಚ್.ಕೆ., ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ ಒಡಿಯೂರು, ದೇವಪ್ಪ ನೋಂಡ, ಬಿ.ಕೆ ಚಂದ್ರಶೇಖರ್, ಲಿಂಗಪ್ಪ ಗೌಡ, ಎಂ.ಉಗ್ಗಪ್ಪ ಶೆಟ್ಟಿ, ಲೋಕನಾಥ ಶೆಟ್ಟಿ, ಗಣೇಶ್ ರೈ, ಶಾರದಮಣಿ, ಸರಿತಾ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply