Header Ads
Header Ads
Breaking News

ಸಹಕಾರಿ ಬ್ಯಾಂಕಿನ 2019-25ನೇ ಸಾಲಿನ ಆಡಳಿತ ಮಂಡಳಿಗೆ ಚುನಾವಣೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕಿನ 2019-25ನೇ ಸಾಲಿನ ಆಡಳಿತ ಮಂಡಳಿಗೆ ಚುನಾವಣೆ ಜನವರಿ 20ರಂದು ನಡೆಯಲಿದೆ. ನಗರದ ಡೊಂಗರಕೇರಿಯ ಸಹಕಾರಿ ಬ್ಯಾಂಕ್ ನಲ್ಲಿ ನಡೆಯಲಿರುವ ಚುನಾವಣೆಗೆ ಭಾರೀ ತಯಾರಿ ನಡೆದಿದೆ.

ಐದು ವರ್ಷಕ್ಕೆ ಒಮ್ಮೆ ನಡೆಯುತ್ತಿರುವ ಸರ್ಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕಿನ ಚುನಾವಣೆಗೆ ಈ ಬಾರಿ 29 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.ಸಾಮಾನ್ಯ ಕ್ಷೇತ್ರದಲ್ಲಿ 7 ಮಂದಿ ಅಭ್ಯರ್ಥಿಗಳನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಬೇಕಾಗಿದೆ.ಹಿಂದುಳಿದ ಪ್ರವರ್ಗ” ಎ”ದಲ್ಲಿ ಹಾಗೂ ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ತಲಾ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಕ್ಷೇತ್ರದಲ್ಲಿ ತಲಾ ಒಬ್ಬ ಅಭ್ಯರ್ಥಿಯನ್ನು ಆಯ್ಕೆಗೊಳಿಸಬೇಕಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಪ್ರಕಾಶ್ ನಾಯಕ್ ಇವರ ತಂಡದ ಅಭ್ಯರ್ಥಿಗಳಿಂದ 13ಮಂದಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡ್ತಾರೆ. ಸಾಮಾನ್ಯ ಕ್ಷೇತ್ರಕ್ಕೆ ಪ್ರಕಾಶ್ ನಾಯಕ್, ಪಿ.ಕೆ.ಕೃಷ್ಣ, ಪ್ರದ್ಮನಾಭ ಜೋಗಿ , ಅಕ್ಷಯ್ ಭಂಡಾರ್ ಕಾರ್, ಸುಜಾತಾ,ಜ್ಯೋತಿ ಪ್ರಕಾಶ್, ಪ್ರವೀಣ್ ಎಸ್ ಸ್ಪರ್ಧೆ ಮಾಡುತ್ತಿದ್ದಾರೆ.ಇನ್ನು ಹಿಂದುಳಿದ ಪ್ರವರ್ಗಕ್ಕೆ

ಜಗದೀಶ್ ಪಿ, ಎಚ್.ಗಣೇಶ್ ರಾವ್,ಸ್ಪರ್ಧಿಸುತ್ತಿದ್ದಾರೆ.ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ತಿಲೋತ್ತಮ,ಶಶಿಕಲಾ ಅವರು ಸ್ಪರ್ಧಾಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಶಿವಾನಂದ ಯಂ, ಪರಿಶಿಷ್ಟಪಂಗಡ ಮೀಸಲು ಕ್ಷೇತ್ರದಲ್ಲಿ ಬಿ.ಕೃಷ್ಣಪ್ಪ ನಾಯ್ಕ ಸ್ಪರ್ಧೆ ಮಾಡ್ತಾ ಇದ್ದಾರೆ.
ಇನ್ನು ಹಿಂದಿನ ಸಾಲಿನ ಅಧ್ಯಕ್ಷರಾಗಿರುವ ಪ್ರಕಾಶ್ ನಾಯಕ್ ನೇತೃತ್ವ ತಂಡವೂ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ.

Related posts

Leave a Reply