Header Ads
Header Ads
Breaking News

ಸಹಕಾರ ರತ್ನ ರಾಜೇಂದ್ರ ಕುಮಾರ್‌ರ ರಜತ ಸಂಭ್ರಮ:ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ 25 ವರುಷ ಪೂರೈಸಿರುವ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ , ಸಾಮಾಜಿಕ ಸಬಲೀಕರಣ ನಿಟ್ಟಿನಲ್ಲಿ ನವೋದಯ ಸ್ವಸಹಾಯ ಸಂಘ ಆರಂಭಕ್ಕೆ ಕಾರಣರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ಭೂಷಣ ಬಿರುದು ಪ್ರದಾನ ಹಾಗೂ ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಜ.19ರಂದು ನಡೆಯುವ ಸಮಾರಂಭ ಕ್ಕೆ ಮಂಗಳೂರು ನಗರದ ಇತಿಹಾಸದ ಲ್ಲಿ ಇದೇ ಪ್ರಥಮವಾಗಿ ನಗರದ ನೆಹರೂ ಮೈದಾನದಲ್ಲಿ 3.53 ಲಕ್ಷ ಚದರ ಅಡಿಯ ವಿಶಾಲ ಸಭಾಂಗಣ ತಲೆ ಎತ್ತಿದೆ.ಸಭಾಂಗಣಕ್ಕೆ ಸಹಕಾರಿ ತತ್ವದ ಬೀಜ ಬಿತ್ತಿದ ಮೊಳಹಳ್ಳಿ ಶಿವರಾಯರ ಹೆಸರಿಡಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿಪ್ರಸಾದ್ ಶೆಟ್ಟಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ನೆಹರೂ ಮೈದಾನದ ಫುಟ್ ಬಾಲ್ ಅಂಗಣದಲ್ಲಿ 210 ಗಣ್ಯರು ಅಸೀನರಾಗಬಹುದಾದ ವಿಶಾಲ ಪ್ರಧಾನ ವೇದಿಕೆ ಹಾಗೂ ಅದರ ಎಡಬಲಗಳಲ್ಲಿ ತಲಾ 150 ಮಂದಿ ಆಸೀನರಾಗಲು ಸಹಕಾರಿ ಹಾಗೂ ನವೋದಯ ವೇದಿಕೆಗಳನ್ನ ರಚಿಸಲಾಗಿದೆ.ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ಸಹಕಾರ ಭೂಷಣ ಬಿರುದು ಪ್ರದಾನ ನಡೆಯಲಿದೆ ಎಂದು ತಿಳಿಸಿದರು. ಈ ನಡುವೆ ಅತ್ಯಂತ ಸುರಕ್ಷಿತ ಹಾಗೂ ಶಿಸ್ತು ಬದ್ಧ ಕಾರ್ಯಕ್ರಮ ನಿರ್ವಹಿಸಲು ಪೂರಕವಾಗಿ 100 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಅಂತಾ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಪ್ರಮುಖರಾದ ರಾಜುಪೂಜಾರಿ, ಶಶಿಕಿರಣ್, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಸುನೀಲ್ ಕುಮಾರ್ ಬಜಗೋಳಿ,ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply