Breaking News

ಸಹ್ಯಾದ್ರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮಂಗಳೂರಿನ ಅಡ್ಯಾರ್ ಸಮೀಪದಲ್ಲಿರುವ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು ಟಿಸಿ‌ಎಸ್ ಗ್ಲೋಬಲ್ ಹೆಡ್ ನಾಗರಾಜ್ ಇಜಾರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಅವರು, ಯಾವುದೇ ವಿಷಯ ದಲ್ಲಿ ಆಸಕ್ತಿ ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತೆ. ಇಷ್ಟು ವರುಷ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ್ದಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ನೀವು ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ನೀವು ಕೊಡುಗೆ ನೀಡಬೇಕೆಂದರು. ಇದೇ ವೇಳೆ ಇ.ಎಸ್ ಚಕ್ರವರ್ತಿ ಮಾತನಾಡಿ, ಕಲಿಕೆ ಮುಖ್ಯವಲ್ಲ,ಅದರ ನ್ಯಾಲೇಜ್ ಪ್ರಾಮುಖ್ಯವಾಗುತ್ತೆ, ಯಾವುದೇ ಕಾರಣಕ್ಕೂ ಬೇರೆಯರನ್ನು ಅವಲಂಭಿಸದೆ, ಸ್ವತಂತ್ರವಾಗಿ ಕೆಲಸ ಮಾಡಬೇಕೆಂದರು.ಈ ವೇಳೆ ಸಹ್ಯಾದ್ರಿ ಕಾಲೇಜಿನ ಚೇರೆಮೆನ್ ಮಂಜುನಾಥ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.ಅಕಾಡೆಮಿ ಡೀನ್ ಗೋರ್ಬಲ್, ನಿರ್ದೇಶಕ ಡಾ. ಡಿ.ಎಲ್ ಪ್ರಭಾಕರ, ಕಾಲೇಜಿನ ಪ್ರಾಂಶುಪಾಲ ಡಾ: ಯು.ಎಂ.ಬೂಷಿ, ಉಪಪ್ರಾಂಶುಪಾಲ ಬಾಲಕೃಷ್ಣ ಉಪಸ್ಥಿತರಿದ್ದರು

Related posts

Leave a Reply