Header Ads
Header Ads
Breaking News

ಸಹ್ಯಾದ್ರಿ ಕಾಲೇಜಿನಲ್ಲಿ ವಿಝ್ ರಸಪ್ರಶ್ನೆ ಸ್ಪರ್ಧೆ|ಮಹೇಶ್ ಕಾಲೇಜ್‌ಗೆ ಸಹ್ಯಾದ್ರಿ ವಿಝ್‌ಕ್ವಿಜ್ ಟ್ರೋಫಿ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ನ ವ್ಯವಹಾರಿಕ ಆಡಳಿತ ವಿಭಾಗ ಆಯೋಜಿಸಿದ್ದ ಸಹ್ಯಾದ್ರಿ ವಿಜ್ ಕ್ವಿಜ್ -2019ಕ್ಕೆ ಅದ್ಧೂರಿ ತೆರೆಬಿತ್ತು. ಮಂಗಳೂರಿನ ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ವಿಜೇತ ತಂಡವಾಗಿ ಹೊರ ಹೊಮ್ಮಿದೆ. ಇನ್ನು ಮಣಿಪಾಲನ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಪ್ರಥಮ ರನ್ನರ್ಸ್ ಆಪ್ ಹಾಗೂ ಎಸ್‌ಡಿಎಂ ಉಜಿರೆ ದ್ವಿತೀಯ ರನ್ನರ್ಸ್ ಆಪ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತು.
 ಮಂಗಳೂರಿನ ಹೊರವಲಯದಲ್ಲಿನ ಸಹ್ಯಾದ್ರಿ ಕಾಲೇಜ್ ಕ್ಯಾಂಪನ್‌ನಲ್ಲಿ ಸಹ್ಯಾದ್ರಿ ವಿಜ್ ಕ್ವಿಜ್ -2019ಯನ್ನು ಆಯೋಜಿಸಿದ್ದು, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಜ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಇನ್ನು ಅಂತಿಮ ಹಂತದ ಸ್ಪರ್ಧೆಗಳು ನಡೆದು ವಿಜೇತರನ್ನು ಘೋಷಿಸಲಾಯಿತು. ನಗರದ ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ವಿಜೇತ ತಂಡವಾಗಿ ಹೊರ ಹೊಮ್ಮಿದೆ. ಇನ್ನು ಮಣಿಪಾಲನ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಪ್ರಥಮ ರನ್ನರ್ಸ್ ಆಪ್ ಹಾಗೂ ಎಸ್‌ಡಿಎಂ ಉಜಿರೆ ದ್ವಿತೀಯ ರನ್ನರ್ಸ್ ಆಪ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತು.ಇನ್ನು ಮಹೇಶ್ ಕಾಲೇಜಿನ ಅಮರ್ ಹಸನ್‌ಸೈಯದ್ ಬೆಸ್ಟ್ ಕ್ವಿಝರ್ ಪ್ರಶಸ್ತಿ ಪಡೆದುಕೊಂಡರು. ಬಳಿಕ ರಾಮಕೃಷ್ಣ ಕ್ರೆಡಟ್ ಕೋ ಅಪರೇಟಿವ್ ಸೊಸೈಟಿಯ ಜಯರಾಮ್ ಬಿ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ, ಮಕ್ಕಳರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತದೆ. ಮುಂದಿನ ಭವಿಷ್ಯ ಒಳ್ಳೆಯದಾಗಲಿ ಶುಭಾ ಹಾರೈಸಿದರು.


ಈ ವೇಳೆ ಮಣಿಪಾಲ್ ಅಕಾಡೆಮಿಯ ವಿದ್ಯಾಶೈಣೆ , ಕಾಲೇಜಿನ ಪ್ರಿನ್ಸಿಪಾಲ್ ಶ್ರೀನಿವಾಸ್ ರಾವ್ ಕುಂಟೆ, ಎಸ್.ಎಸ್.ಬಾಲಕೃಷ್ಣ, ವಾಣಿಜ್ಯವಿಭಾಗದ ವಿಶಾಲ್ ಸುಮತ ಮತ್ತಿತರರು ಉಪಸ್ಥತಿರಿದ್ದರು.
ಬಹುಮಾನವೂ ಒಟ್ಟು 50 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನ ಒಳಗೊಂಡಿದೆ. ಮಂಗಳೂರು, ಉಡುಪಿ, ಕೊಡಗು, ಕಾರವಾರ, ಶಿವಮೊಗ್ಗ ಸೇರಿಧಮತೆ ಅನೇಕ ಕಡೆಗಳಿಂದ 9 ಸಾವಿರ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಭಾಗವಹಿಸಿದ್ದು, 950 ವಿದ್ಯಾರ್ಥಿಗಳು ಫೈನಲ್ ಹಂತಕ್ಕೆ ಆಯ್ಕೆಯಾಗಿದ್ದರು.

Related posts

Leave a Reply

Your email address will not be published. Required fields are marked *