Header Ads
Breaking News

ಸಹ್ಯಾದ್ರಿ ಕಾಲೇಜ್‌ ಆಫ್ ‌ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ : ಮೂರು ದಿನಗಳ ಪಿಜಿಸಿಇಟಿ ಆನ್‌ಲೈನ್‌ತರಬೇತಿ

ಸಹ್ಯಾದ್ರಿಕಾಲೇಜ್‌ಆಫ್‌ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು, ಎಂಬಿಎ ಆಕಾಂಕ್ಷಿಗಳಿಗೆ ಮೂರು ದಿನಗಳ ಪಿಜಿಸಿಇಟಿ ಆನ್‌ಲೈನ್‌ತರಬೇತಿಯನ್ನು 2020ರಜುಲೈ 23 ರಿಂದ 25 ರವರೆಗೆಆಯೋಜಿಸುತ್ತಿದೆ.ಮಂಗಳೂರಿನ ಸಹ್ಯಾದ್ರಿಕಾಲೇಜ್‌ಆಫ್‌ಇಂಜಿನಿಯರಿಂಗ್& ಮ್ಯಾನೇಜ್‌ಮೆಂಟ್, ಕರ್ನಾಟಕದ ಬಿ-ಸ್ಕೂಲ್‌ಗಳಲ್ಲಿ ಸರ್ಕಾರಿಕೋಟಾದಡಿಯಲ್ಲಿ ಎಂಬಿಎ ಸೇರಲು ಬಯಸುವ ವಿದ್ಯಾರ್ಥಿಗಳಿಗೆ 2020ರಜುಲೈ 23 ರಿಂದ 25 ರವರೆಗೆಆನ್‌ಲೈನ್ ಮೂರು ದಿನಗಳ ಪಿಜಿಸಿಇಟಿ ತರಬೇತಿಯನ್ನು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆಆಯೋಜಿಸುತ್ತಿದೆ. ಮಂಗಳೂರಿನ ವಿದ್ಯಾರ್ಥಿಗಳಲ್ಲದೆ ಬೆಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಕುಮ್ತಾ, ಮಡಿಕೇರಿ, ಕುಂದಾಪುರ, ಕಾರ್ವಾರ್, ಬೆಲಗವಿ, ಉಡುಪಿ ಮತ್ತು ಭಟ್ಕಲ್ ಮುಂತಾದ ವಿವಿಧ ಸ್ಥಳಗಳಿಂದ ಸುಮಾರು 650 ಪದವೀಧರರುತರಬೇತಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಮೂರು ದಿನಗಳಲ್ಲಿ, ಕ್ವಾಂಟಿಟೇಟಿವ್ ಅನಾಲಿಸಿಸ್, ರೀಸನಿಂಗ್&ಜನರಲ್‌ಇಂಟೆಲಿಜೆನ್ಸ್, ಇಂಗ್ಲಿಷ್ ಭಾಷಯಲ್ಲಿ ಸಾಮಾನ್ಯಜ್ಞಾನ ಮತ್ತು ಪ್ರಾವೀಣ್ಯತೆ ಎಂಬ ನಾಲ್ಕು ಕ್ಷೇತ್ರಗಳಲ್ಲಿನ ಅಧಿವೇಶನಗಳನ್ನು ತ್ರಿಶಾಗ್ರೂಪ್‌ಆಫ್‌ಇನ್ಸ್ಟಿಟ್ಯೂಶನ್ಸ್ ಸ್ಥಾಪಕ ಸಿಎ ಗೋಪಾಲಕೃಷ್ಣ  ಭಟ್‌ಅವರುಆನ್ ಲೈನ್‌ತರಬೇತಿ ನೀಡುತ್ತಾರೆ ; ಶ್ರೀ ವಿವೇಕಾನಂದಕಾಮತ್, ಬ್ರಹ್ಮವರ ಬ್ರಾನ್ಸಾಫ್ಟ್‌ಅಕಾಡೆಮಿಯ ಪ್ರಾಂಶುಪಾಲರು; ಪ್ರೊ. ರಮೇಶ್ ಕೆ ಜಿ, ಡೀನ್-ಸ್ಟ್ರಾಟೆಜಿಕ್ ಪ್ಲಾನಿಂಗ್ ಮತ್ತು ಮಂಗಳೂರಿನ ಸಹ್ಯಾದ್ರಿಕಾಲೇಜ್‌ಆಫ್‌ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಸಲಹೆಗಾರರಾದ ಶ್ರೀ ಅಂಕಿತ್‌ಎಸ್‌ಕುಮಾರ್. ಇವರುಗಳು ಪ್ರೋಗ್ರಾಂ ಪಿಜಿಸಿಇಟಿಯ ಪರೀಕ್ಷೆ ಮೋಡಸ್‌ಒಪೆರಾಂಡೋ ಬಗ್ಗೆ ವಿದ್ಯಾರ್ಥಿಗಳಿಗೆ ತಮ್ಮಅನುಭವವನ್ನುಆನ್‌ಲೈನ್ ನಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಇದರಲ್ಲಿಅಣಕು ಪರೀಕ್ಷೆಯನ್ನು ಸಹ ಒಳಗೊಂಡಿರುತ್ತದೆ.

Related posts

Leave a Reply

Your email address will not be published. Required fields are marked *