Header Ads
Header Ads
Breaking News

ಸಾಂಪ್ರದಾಯಿಕವಾಗಿ ನಡೆದ ಮಣೂರು ಹರಕೆ ಕಂಬಳ

ಉಡುಪಿ ಜಿಲ್ಲೆಯಲ್ಲೇ ಪ್ರಸಿದ್ದಿ ಪಡೆದ ಮಣೂರು ಗ್ರಾಮದ ಹರಕೆ ಕಂಬಳ ನಡೆಯಿತು. ಮನೆಯಲ್ಲಿನ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ಮಣೂರು ಕಂಬಳದಲ್ಲಿ ಓಡಿಸುತ್ತೇನೆ ಎಂದು ಹರಕೆ ಹೋಗುವುದು ಇಲ್ಲಿನ ಸುತ್ತಮುತ್ತಲಿನ ನಡೆದು ಬಂದ ಆಚರಣೆ.

ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಸ್ಪರ್ಧೆಗಳಿಲ್ಲದೇ ಕೇವಲ ಹರಕೆ ತೀರಿಸಲು ನೂರಾರು ಕೋಣಗಳು ಮತ್ತು ದನ ಕರು ತಂದು ಕಂಬಳದ ಗದ್ದೆಯಲ್ಲಿ ಓಡಿಸುವ ಮೂಲಕ ಹರಕೆ ತೀರಿಸಲಾಯಿತು. ಸುಮಾರು 200 ವರ್ಷ ಇತಿಹಾಸವಿರುವ ಮಣೂರು ಕಂಬಳಗದ್ದೆ ಮನೆಯವರಾದ ರಘುರಾಮ ಶೆಟ್ಟಿ ಹರಕೆ ಕಂಬಳಕ್ಕೆ ಚಾಲನೆ ನೀಡಿದರು. ಸ್ಥಳೀಯರು ತಮ್ಮ ತಮ್ಮ ಮನೆಗಳಿಂದ ಕಂಬಳಕ್ಕೆ ಕೋಣಗಳನ್ನು ಸಿಂಗಾರಗೊಳಿಸಿ ವಾದ್ಯ ಮೇಳಗಳೊಂದಿಗೆ ಕಂಬಳ ಗದ್ದೆಗೆ ತಂದು ಓಡಿಸಿದರು. ಕಂಬಳದ ಕೋಣ ಓಡಿಸುವವರಿಗೆ ಹುಮ್ಮಸ್ಸು ನೀಡಲು ಡೋಲು ನಗಾರಿ ಬಾರಿಸಿ ಉತ್ತೇಜಿಸಲಾಯಿತು. ಕಂಬಳದ ಕೊನೆಯಲ್ಲಿ ಕೋಣ ತಂದವರಿಗೆ ಎಳನೀರು, ಕಬ್ಬಿನ ಕೋಲು ನೀಡಿ ವಿಶೇಷವಾಗಿ ಗೌರವಿಸಲಾಯಿತು.

Related posts

Leave a Reply