Header Ads
Header Ads
Header Ads
Breaking News

ಸಾತ್ವಿಕ ಜೀವನ, ಧರ್ಮದ ನಡವಳಿಕೆ ವ್ಯಕ್ತಿಯೋರ್ವನ ಉತ್ತಮ ಜೀವನಕ್ಕೆ ದಾರಿ ಅಂತಹ ಬದುಕು ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರ ಬದುಕು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆ

ಬಂಟ್ವಾಳ: ಸಾತ್ವಿಕ ಜೀವನ ಹಾಗೂ ಧರ್ಮದ ನಡವಳಿಕೆಯಿಂದ ವ್ಯಕ್ತಿ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಅಂತಹ ಬದುಕು ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವರದ್ದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಬಿ.ಸಿ.ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ನಡೆದ ಡಾ. ಏರ್ಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ಆಳ್ವರು ಭಾವನ ಜೀವಿ. ಭಾವುಕನಿಂದ ಉತ್ತಮ ಸಾಹಿತ್ಯ ಮೂಡಿ ಬರಲು ಸಾಧ್ಯವಿದೆ. ಅವರು ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷರಾಗಿದ್ದರೂ ಎಲ್ಲಾ ಧರ್ಮದ ಜನರನ್ನು ಪ್ರೀತಿಸಿದವರು, ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಗೌರವಿಸಿದವರು, ಒರ್ವ ಹಿಂದು ಹೇಗಿರಬೇಕು ಎನ್ನುವುದಕ್ಕೆ ಅವರು ನಿದರ್ಶನ ಎಂದು ಡಾ. ಹೆಗ್ಗಡೆ ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿದರು.ಸಮಿತಿಯ ಅಧ್ಯಕ್ಷ ಮೋಹನ್‌ರಾವ್, ಸಂಚಾಲಕ ವಿಶ್ವನಾಥ ಬಂಟ್ವಾಳ ವೇದಿಕೆಯಲ್ಲಿದ್ದರು.
ವರದಿ: ಸಂದೀಪ್ ಸಾಲ್ಯಾನ್, ಬಂಟ್ವಾಳ

Related posts

Leave a Reply