Header Ads
Breaking News

ಸಾಧನೆಯತ್ತ ಹೆಜ್ಜೆಯಿಡುತ್ತಿರುವ ಕೃಷಿಕ

ಮಂಜೇಶ್ವರ: ಇಂದಿನ ಯುಗದಲ್ಲಿ ಕೃಷಿ ಭೂಮಿಯನ್ನು ಸಮತಟ್ಟು ಮಾಡಿ ಕಟ್ಟಡಗಳನ್ನು ಕಟ್ಟಿ ಕೃಷಿವಲಯವೇ ನಾಶಗೊಳ್ಳುತ್ತಿರುವ ಮಧ್ಯೆ ಇಲ್ಲೊಬ್ಬರು ಕಾರ್ಮಿಕರಾಗಿ ಸಾಲೆತ್ತೂರಿನಿಂದ ದುಡಿಯಲು ಬಂದವರು ತನ್ನ ಹದಿನೇಳು ವರ್ಷದ ಅನುಭವದಿಂದ ಸುಮಾರು ಎರಡೂವರೆ ಎಕ್ರೆ ಬಂಜರು ಭೂಮಿಯನ್ನು ಗೇಣಿಗೆ ಪಡೆದು ಅದಕ್ಕೆ ಸುಮಾರು ನಲ್ವತ್ತು ಸಾವಿರ ರೂಪಾಯಿ ವ್ಯಹಿಸಿ ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.ಸಾಲೆತ್ತೂರು ನಿವಾಸಿಯಾಗಿರುವ ಅಬ್ದುಲ್ ಹಮೀದ್ ಎಂಬವರು ಕಳೆದ ಹದಿನೇಳು ವರ್ಷಗಳಿಂದ ಮಂಜೇಶ್ವರದ ಆಸುಪಾಸಿನಲ್ಲಿ ಕೃಷಿಕರೊಂದಿಗೆ ಕಾರ್ಮಿಕರಾಗಿ ಸೇವೆಯನ್ನು ಸಲ್ಲಿಸುತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಸ್ವತಃ ಈ ಕಾರ್ಯದಲ್ಲಿ ಯಾಕೆ ತೊಡಗಿಸಿಕೊಳ್ಳಬಾರದೆಂಬ ಚಿಂತೆ ಇವರನ್ನು ಕಾಡ ತೊಡಗಿದಾಗ ಅವರಿಗೆ ಮಂಜೇಶ್ವರ ಚೆಕ್ ಪೋಸ್ಟ್ ಪರಿಸರದಲ್ಲಿರುವ ವಾಮಂಜೂರು ಬಯಲಿನಲ್ಲಿದ್ದ ಸುಮಾರು ಎರಡೂವರೆ ಎಕ್ರೆ ಭೂಮಿಯನ್ನು ಪಡೆದು ಅದನ್ನು ಕೃಷಿ ಭೂಮಿಯನ್ನಾಗಿಸಿ ಭತ್ತವನ್ನು ಬಿತ್ತಿದ್ದಾರೆ.

ಇದನ್ನು ಕೊಯ್ಯಲು ಇನ್ನೂ 15 ಸಾವಿರ ರೂ. ಖರ್ಚು ಇದೆಯೆಂದು ಹೇಳುತಿದ್ದಾರೆ. ಸರಿಯಾದ ಸಮಯದಲ್ಲಿ ನಿರೀಕ್ಷೆಗಿಂತ ಅಧಿಕ ಮಳೆ ಬಾರದೇ ಇದ್ದರೆ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿ ಇವರು ಹೇಳುತ್ತಿರುವ ಇವರು. ದೃತಿಗೆಡದ ಸಮಗ್ರ ಬೇಸಾಯದಿಂದ ಸಾಧನೆಯತ್ತ ಹೆಜ್ಜೆಯಿಡುತ್ತಿದ್ದಾರೆ. ಬಡತನದಲ್ಲಿರುವ ಇವರು ವಾಮಂಜೂರು ಪರಿಸರದಲ್ಲಿ ಬಾಡಿಗೆ ಮನೆಯಂದರಲ್ಲಿ ತನ್ನ ಪತ್ನಿಯೊಂದಿಗೆ ವಾಸವಾಗಿದ್ದಾರೆ.ಮದುವೆಯಾಗಿ 13 ವರ್ಷ ಕಳೆದರೂ ಇವರಿಗೆ ಈ ತನಕ ಮಕ್ಕಳ ಭಾಗ್ಯ ಲಭಿಸಿಲ್ಲವೆಂದು ಹೇಳುತ್ತಿರುವ ಹಮೀದ್ ಕೃಷಿಭವಣ ಹಾಗೂ ಪಂ. ವತಿಯಿಂದ ಆರ್ಥಿಕವಾಗಿ ಏನಾದರೂ ಸಹಾಯ ಲಭಿಸಿದರೆ ಇನ್ನೂ ಹೆಚ್ಚಿನ ಭೂಮಿಯನ್ನು ಗೇಣಿಗೆ ಪಡೆದು ಉತ್ತಮವಾದ ಕೃಷಿಯನ್ನು ಮಾಡಬಹುದಾಗಿ ಇವರು ಹೇಳುತಿದ್ದಾರೆ.ಗೇಣಿಗೆ ಪಡೆದ ಜಮೀನಿನಲ್ಲಿ ಹಮೀದ್ ರವರ ಫಲದ ಶ್ರಮದಿಂದ ಫಲವತ್ತಾದ ಭೂಮಿಯನ್ನಾಗಿಸುವದನ್ನು ನೋಡಿದರೆ ಕೃಷಿಕರನ್ನೇ ತಲೆ ತಗ್ಗಿಸುವಂತೆ ಮಾಡಬಹುದು.

Related posts

Leave a Reply