Header Ads
Header Ads
Breaking News

ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ. ಸಾಧನೆಗೈದ ಗಣ್ಯರಿಗೆ ಆಭಿನಂದನಾ ಕಾರ್ಯಕ್ರಮ.

ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.ಸಾನಿಧ್ಯ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಮತ್ತು ರಾಜೀವ್ ಗಾಂಧಿ ಅಚೀವ್‌ಮೆಂಟ್ ಪ್ರಶಸ್ತಿ ಪುರಸ್ಕೃತರಾದ ಮಹಾಬಲ ಮಾರ್ಲ ಮತ್ತು ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪದ್ಯಾಯರಾದ ಜೆ. ಎಫ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ಜೆ. ಎಫ್ ಡಿಸೋಜಾ ಅವರು, ಆಭಿನಂದನೆ ಸಲ್ಲಿಸಿ ಗೌರವ ತೋರಿದ ಸಾನಿಧ್ಯ ಆಡಳಿತ ಮಂಡಳಿಯವರಿಗೆ ಆಭಾರಿಯಾಗಿದ್ದೇನೆ ಎಂದ ಅವರು ಸಾನಿಧ್ಯದಲ್ಲಿರುವ ಮಕ್ಕಳ ಪೋಷಣೆ ಮಾಡುವ ಕೆಲಸ ಸುಲಭದಲ್ಲಿ ಅಂತಹ ಒಂದು ಕಷ್ಟದ ಕೆಲಸವನ್ನು ಮಾಡುತ್ತಿರುವ ಸಾನಿಧ್ಯ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಆನಂತರ ಮಾತನಾಡಿದ ಮಾಜಿ ಮೇಯರ್ ಮಹಾಬಲ ಮಾರ್ಲ ಅವರು ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ ಎಂದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್, ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply