Header Ads
Header Ads
Breaking News

ಸಾನಿಧ್ಯ ಮಕ್ಕಳಿಂದ ವಿನೂತನವಾಗಿ ಗಾಂಧಿ ಜಯಂತಿ ಆಚರಣೆ

ಮಂಗಳೂರಿನ ಶಕ್ತಿ ನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಮಾಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಗಾಂಧೀ ಜಯಂತಿಯ ಪ್ರಯುಕ್ತ ಮಕ್ಕಳು ಮಾನ್‌ಸೋಬಾನ್‌ನಿಂದ ಸಾನಿಧ್ಯ ಶಾಲೆ ವರೆಗೆ ಮೆರೆವಣಿಗೆಯಲ್ಲಿ ಸಾಗಿದರು. ಆನಂತರ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. 

ನಂತರದ ಮಾತನಾಡಿದ ಉದ್ಯಮಿ ಕೆ.ಸಿ. ನಾಯಕ್ ಅವರು, ಗಾಂಧೀಜಿಯವರ ತತ್ವ ಆದರ್ಶಗಳನ್ನು ಪ್ರತಿಯೊಂದು ಮಕ್ಕಳು ಪಾಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಆನಂತರ ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ನಂದಕುಮಾರ್, ಎಂ.ಬಿ. ದೇವದತ್ತರಾವ್, ಸುಮಾ ಮತ್ತು ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.

Related posts

Leave a Reply