Header Ads
Header Ads
Breaking News

ಸಾನಿಧ್ಯ ವಸತಿಯುತ ಶಾಲೆಯಲ್ಲಿ ಹ್ಯಾಪಿ ಸ್ಕೂಲ್. ಸಾನಿಧ್ಯ ಶಾಲೆಗೆ ಪೀಠೋಪಕರಣಗಳ ಕೊಡುಗೆ. ಮಂಗಳೂರಿನ ಆರ್.ಕೆ. ಬನ್ಸಾಲ್ ಗ್ರೂಪ್‌ನಿಂದ ಹಸ್ತಾಂತರ.

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಹ್ಯಾಪಿ ಸ್ಕೂಲ್ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.ಸಾನಿಧ್ಯ ಭಿನ್ನ ಸಾಮರ್ಥ್ಯದ ವಸತಿಯುತ ಶಾಲೆ ಮತ್ತು ಇನ್ನರ್ ವಿಲ್ ಕ್ಲಬ್ ಮಂಗಳೂರು ಉತ್ತರ ಜಿಲ್ಲೆ 318ರ ವತಿಯಿಂದ ಹ್ಯಾಪಿ ಸ್ಕೂಲ್ ಎಂಬ ಕಾರ್ಯಕೆಮ ಹಮ್ಮಿಕೊಂಡರು. ಕಾರ್ಯಕ್ರಮವನ್ನು ಮಂಗಳೂರು ಮಹಾನಗ ಪಾಲಿಕೆಯ ಆಯುಕ್ತರಾದ ಮಹಮ್ಮದ್ ನಝೀರ್ ಅವರು ಉದ್ಘಾಟಿಸಿರು. ಬಳಿಕ ಮಾತನಾಡಿದ ಅವರು, ಸಾನಿಧ್ಯ ಶಾಲೆಯಲ್ಲಿ160 ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕೆಲಸವನ್ನು ಡಾ. ವಸಂತ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಆನಂತರ ಎ.ಕೆ. ಬನ್ಸಾಲ್ ಗ್ರೂಪ್‌ನ ಸುಶ್ಮಾ ಬನ್ಸಾಲ್ ಅವರು ಮಾತನಾಡಿ, ಸಾನಿಧ್ಯ ಮಕ್ಕಳನ್ನು ಸಾಕಿ ಸಲಹುವುದು ಸುಲಭದ ಕೆಲಸವಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸಾನಿಧ್ಯ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಈ ಸಂದರ್ಭ ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು.ಆರ್.ಕೆ. ಬನ್ಸಾಲ್ ಗ್ರೂಪ್‌ನಿಂದ ಸಾನಿಧ್ಯ ವಸತಿಯುತ ಶಾಲೆಗೆ ನೀಡಲಾದ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದ ಪೀಠೋಪಕರಣಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.ಈ ಸಂದರ್ಭ ಕಾರ್ಯಕ್ರಮದಲ್ಲಿ ವಾಸುದೇವ ಶೆಣೈ, ಎಕೆ ಬನ್ಸಾಲ್ ಗ್ರೂಪ್‌ನ ಅನಿಲ್ ಬನ್ಸಾಲ್, ಇನ್ನರ್‌ವಿಲ್ ಕ್ಲಬ್‌ನ ನೀನಾ ಬಿ. ಶೆಟ್ಟಿ, ಶ್ರೀ ಗಣೇಶ್ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮಹಾಬಲ ಮಾರ್ಲ, ಟೀನಾ ಸುಜಿತ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply