Header Ads
Header Ads
Header Ads
Breaking News

ಸಾನಿಧ್ಯ ವಸತಿ ಶಾಲೆಗೆ ರೋಟರಿ ರಾಜ್ಯಪಾಲ ಭೇಟಿ ರೋಟರಿಯನ್ ಎಮ್.ಎಮ್. ಚೆಂಗಪ್ಪರಿಂದ ಶಾಲೆ ವೀಕ್ಷಣೆ ಮಕ್ಕಳ ಕಾರ್ಯಚಟುವಟಿಕೆಗೆ ಬಗ್ಗೆ ಶ್ಲಾಘನೆ

ಮಂಗಳೂರಿನ ಶಕ್ತಿನಗರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಗೆ ರೋಟರಿ ರಾಜ್ಯಪಾಲ ರೊಟೇರಿಯನ್ ಎಮ್.ಎಮ್. ಚೆಂಗಪ್ಪ ಅವರು ಭೇಟಿ ನೀಡಿದರು,

ಸಾನಿಧ್ಯದಲ್ಲಿ ನಿರ್ಮಿಸಲಾದ ‘ಸಾನಿಧ್ಯ ಶಾಶ್ವತ ಮನೆ’ ಮಾದರಿಯ ಕೋಣೆಯನ್ನು ರೋಟರಿ ರಾಜ್ಯಪಾಲ ಎಮ್.ಎಮ್. ಚೆಂಗಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾನಿಧ್ಯದ ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿನ ಸಾನಿಧ್ಯ ವಸತಿ ಶಾಲೆಯ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಎಲ್ಲಾ ಮಕ್ಕಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಮಾಡಲು ಅತ್ಯಂತ ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಧಾನಿ ರೋಟರಿಯನ್ ಖಜಾಂಜಿ ಶ್ಯಾಮ್ ಪ್ರಕಾಶ್ ಆವರನ್ನು ಸಾನಿಧ್ಯದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ರೋಟರಿ ರಾಜ್ಯಪಾಲ ಎಮ್.ಎಮ್. ಚೆಂಗಪ್ಪ ನೇತೃತ್ವದಲ್ಲಿ ಸಾನಿಧ್ಯದ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಿದರು.

ಈ ಸಂದರ್ಭ ರೋಟರಿ ಮೆಟ್ರೋ ಅಧ್ಯಕ್ಷರಾದ ಚಂದ್ರಶೇಖರ್ ಭಟ್, ಕಾರ್ಯದರ್ಶಿ ರಂಗನಾಥ್ ಭಟ್, ಸಾನಿಧ್ಯದ ಉಪಾಧ್ಯಕ್ಷರಾದ ದೇವದತ್ ರಾವ್, ಖಜಾಂಜಿ ಜಗದೀಶ್ ಶೆಟ್ಟಿ, ಗಣೇಶ್ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮಹಾಬಲ ಮಾರ್ಲ, ಸಾನ್ನಿಧ್ಯದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply