Header Ads
Header Ads
Header Ads
Breaking News

ಸಾಮಾಜಿಕ ಕಳಕಳಿಗಾಗಿ ಕಟಪಾಡಿಯಲ್ಲಿ ತ್ರಿಭಾಷಾ ನಾಟಕೋತ್ಸವ ವೃದ್ಧಾಶ್ರಮ ಕಟ್ಟಡಕ್ಕೆ ವಿನಿಯೋಗವಾಗಲಿದೆ ಉಳಿಕೆ ಹಣ

ಕರ್ನಾಟಕ ತುಳು ಸಾಹಿತ್ಯ,ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಇದರ ಸಹಯೋಗದೊಂದಿಗೆ ವನಸುಮ ವೇದಿಕೆ ಕಟಪಾಡಿ ಇವರಿಂದ ತ್ರಿಭಾಷಾ ರಂಗೋತ್ಸವ ಜನವರಿ 28 ರಿಂದ 30 ರತನಕ ಕಟಪಾಡಿ ಎಸ್.ವಿ.ಎಸ್ ಪ್ರೌಢಶಾಲೆ ಯಲ್ಲಿ ಜರಗಲಿದೆ. ಈ ನಾಟಕದಿಂದ ಉಳಿಕೆ ಹಣವನ್ನು ಸಮಾಜದಿಂದ ತಿರಸ್ಕರಿಸಲ್ಪಟ್ಟ ವಯೋವೃದ್ಧರಿಗಾಗಿ ಕಾರ್ಯಾಚರಿಸುತ್ತಿರುವ ವೃದ್ಧಾಶ್ರಮದ ನೂತನ ಕಟ್ಟಡಕ್ಕೆ ವಿನಿಯೋಗವಾಗಲಿದೆ ಎಂದು ವನಸುಮ ಟ್ರಸ್ಟ್ ಅದ್ಯಕ್ಷ ಬಾಸುಮ ಕೊಡಗು ಹೇಳಿದ್ದಾರೆ.

ಇವರು ಕಾಪು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಿನ್ನ ಕಾರ್ಯಕ್ರಮಗಳನ್ನು ಕಳೆದ ನಾಲ್ಕು ವರ್ಷಗಳಿಂದ ರಾಜ್ಯಾದ್ಯಂತ ಪ್ರದರ್ಶಿಸಿ ಇದೀಗ ಸಾಮಾಜಿಕ ಕಳಕಳಿಯಿಂದ ಈ ನಾಟಕೋತ್ಸವವನ್ನು ಮಾಡುವವರಿದ್ದೇವೆ. ಮೊದಲ ದಿವಸ ಝಜ್ ಕೊಂಕಣಿ ನಾಟಕ,ಎರಡನೇ ದಿವಸ ಮಲಾಲಾ ಅಲ್ಲ ಎಂಬ ಕನ್ನಡ ನಾಟಕ ಮೂರನೇ ದಿವಸ ಬರ್ಬರಿಕಾ ತುಳು ನಾಟಕ ಆಯೋಜಿಸಿದ್ದೇವೆ. ಪ್ರತಿ ದಿನ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮದ ಮೊದಲುಗಾನ ಪಲ್ಲವಿ ತಂಡದಿಂದ ರಂಗಗೀತೆಗಳ ಕಾರ್ಯ ಕ್ರಮವಿರುತ್ತದೆ. ಪ್ರತೀ ದಿನ ಲಕ್ಕಿ ಪ್ರೇಕ್ಷಕರನ್ನು ಆಯ್ಕೆ ಮಾಡಿ ಬೆಳ್ಳಿ ನಾಣ್ಯ ಬಹುಮಾನ ವಿರುತ್ತದೆ ಎಂದು ಹೇಳಿದರು.

Related posts

Leave a Reply