Header Ads
Header Ads
Breaking News

ಸಾಮಾಜಿಕ ಕಾರ್ಯಕರ್ತ ರೋಶನ್ ಡಿಸೋಜಾರಿಗೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ

ಪಿಂಗಾರ ಕನ್ನಡ ಸುದ್ಧಿ ಪತ್ರಿಕೆ ವತಿಯಿಂದ ನೀಡುತ್ತಿರುವ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಯ 2018ನೇ ಸಾಲಿನ ಪ್ರಶಸ್ತಿಯು ಸಾಮಾಜಿಕ ಕಾರ್ಯಕರ್ತ ರೋಶನ್ ಡಿಸೋಜಾ ಅವರಿಗೆ ಲಭಿಸಿದೆ. ನವೆಂಬರ್ 13ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಆಯ್ಕೆ ಸಮಿತಿ ಸಂಚಾಲರಾಗಿರುವ ಹರಿಕೃಷ್ಣ ಪುನರೂರು ಮಾತನಾಡಿದ ಅವರು ಸಾಮಾಜಿಕ ಕಾರ್ಯಕರ್ತರಾಗಿರುವ ಬೆಳ್ಮಣ್ ರೋಶನ್ ಡಿಸೋಜಾ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವುದಲ್ಲೇ ಹ್ಯುಮಾನಿಟಿ ಎನ್ನುವ ಸ್ವಯಂಸೇವಾ ಸಂಸ್ಥೆಯನ್ನ ಆರಂಭಿಸಿ ದಾನಿಗಳ ಮೂಲಕ ಅಶಕ್ತರಿಗೆ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಇನ್ನು ನವೆಂಬರ್ 13ರಂದು ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರಿನ ಧರ್ಮಾಧ್ಯಕ್ಷ ವಂದನೀಯ ಡಾ|ಪೀಟರ್ ಪೌಲ್ ಸಲ್ಡಾನಾ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕೇಮಾರು ಸಾಂಧೀಪನಿ ಶ್ರೀ ಈಶವಿಠಲದಾಸ ಸ್ವಾಮೀಜಿ, ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೋ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಎಲಿಯಾಸ್ ಮಹಮ್ಮದ್ ತುಂಬೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇನ್ನು ಈ ಬಾರಿ ಪ್ರಶಸ್ತಿಗೆ 30ಕ್ಕೂ ಅಧಿಕ ಅರ್ಜಿ ಬಂದಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಳ್ಮಣ್ ರೋಶನ್ ಡಿಸೋಜಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಪಿಂಗಾರ ಪ್ರತಿಕೆ ಸಂಪಾದಕ ಹಾಗೂ ಆಯ್ಕೆ ಸಮಿತಿ ಸಂಚಾಲರಾಗಿರುವ ರೇಮಂಡ್ ಡಿಕ್ಹುನಾ ಮಾತನಾಡಿ, ಪಿಂಗಾರ ಕನ್ನಡ ಸುದ್ಧಿ ಪತ್ರಿಕೆ, ಪಿಂಗಾರ ಬಳಗ ವತಿಯಿಂದ ಕಳೆದ ಹಲವಾರು ವರುಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹನ್ ವ್ಯಕ್ತಿಗಳಿಗೆ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿ4ನ್ಯೂಸ್ ಸಹಭಾಗಿತ್ವದಲ್ಲಿ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದು , ಇದೇ ವೇದಿಕೆಯಲ್ಲಿ ವಿ4ನ್ಯೂಸ್‌ನ ಕಾಮಿಡಿ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಕಾರ್ಪೋರೇಶನ್ ಬ್ಯಾಂಕ್ ಪೂರ್ವ ಜನರಲ್ ಮೆನೆಜರ್ ಸಿ ಜಿ, ಪಿಂಟೋ ಉಪಸ್ಥತಿರಿದ್ದರು.

Related posts

Leave a Reply