Header Ads
Header Ads
Header Ads
Breaking News

ಸಾಮಾಜಿಕ ಜಾಲ ತಾಣಗಳಿಂದ ಮಿಂಚಿದ ಯುವಕ ರೂಪದರ್ಶಿಯಾಗಿ ಕನಸು ನನಸಾಗಿದ ವಿನು ಮಾನಕಾಮೆ ಭಟ್ಕಳದ ಯುವಕ ಇದೀಗ ಮಿಸ್ಟರ್ ಸೌತ್ ಕರ್ನಾಟಕ

ಈಗಿನ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದ್ದು, ಇದರ ಸಕಾರಾತ್ಮಕ ಬಳಕೆಯಿಂದ ಈಗಿನ ಯುವ ಜನತೆ ತಮ್ಮ ಹೆಸರಿನ ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತಿರುವುದು ಜಾಸ್ತಿಯಾಗುತ್ತಿದೆ. ಇದೇ ರೀತಿ ಇಲ್ಲೊಬ್ಬ ಯುವಕ ಪೇಸ್ಬುಕ್, ಇನ್‌ಸ್ಟಾಗ್ರಾಮಗಳಂತಹ ಸಾಮಾಜಿಕ ಜಾಲತಾಣಗಳ ತನ್ನ ಕನಸನ್ನು ನನಸು ಮಾಡುವತ್ತ ಬೆನ್ನಟ್ಟಿ ಹೋಗಿ ಒಬ್ಬ ಸುಂದರ ರೂಪದರ್ಶಿ ಆಗಿದ್ದಾನೆ. ಆತ ಯಾರೆಂಬುದನ್ನು ತಿಳಿಯಬೇಕೆ ಹಾಗಿದ್ದರೆ ಈ ವರದಿ ನೋಡಿ,,,,

ಹೌದು ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ವಿಭಾಗದಲ್ಲಿ ಭಟ್ಕಳದ ಸ್ಪೂರದ್ರೂಪಿ ಯುವಕ ವಿನು ಮಾನಕಾಮೆ ಹೊರಹೊಮ್ಮಿದ್ದಾನೆ. ಯುವಕರು ತಮ್ಮ ಆಸೆಯ ಕನಸನ್ನು ನನಸು ಮಾಡಿಕೊಳ್ಳುವತ್ತ ಸಾಗಬೇಕು ಎನ್ನುವುದಕ್ಕೆ ಈ ಯುವಕನ ಸಾಧನೆಯ ಸಾಕ್ಷಿ ಎನ್ನಬಹುದು.

ಭಟ್ಕಳದ ಈ ಯುವಕ ತನ್ನ ಚಿಕ್ಕವಯಸ್ಸಿನ ಆಸೆಯನ್ನು ಈಡೇರಿಸಿಕೊಳ್ಳವತ್ತ ಶತಾಯಗತಾಯ ಪ್ರಯತ್ನಿಸಿ ಕೊನೆಗೂ ಯಶಸ್ಸು ಪಡೆದಿದ್ದಾನೆ. ಅಡಿಶನ್‌ನಲ್ಲಿ 300 ಜನ ಸಹ ಸ್ಪರ್ಧಿಗಳಲ್ಲಿ ಭಾಗವಹಿಸಿದ್ದ ಭಟ್ಕಳದ ಸ್ಪೂರದ್ರೂಪಿ ಯುವಕ ವಿನು ಮಾನಕಾಮೆ ಅಂತಿಮವಾಗಿ 23 ರಲ್ಲಿ ಓರ್ವನಾಗಿ ಹೊರ ಹೊಮ್ಮಿ ಸ್ಪರ್ಧೇಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾನೆ. ಅಕ್ಟೋಬರ್‌ನಲ್ಲಿ ಮಂಗಳೂರಿನ ರಿವರ್‌ಡೇಯಲ್ಲಿ ನಡೆದ ಮಿಸ್ಟರ್ ಎಂಡ್ ಮಿಸ್ ಗ್ರಾಂಡ್ ಸೌತ್ ಇಂಡಿಯಾ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರ ಹೊಮ್ಮುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಈತನ ಹಾಡು, ಡಾನ್ಸ್ ಕೂಡಾ ಗಮನ ಸೆಳೆದಿರುವುದು ಅಂತಿಮವಾಗಿ ವಿಜಯಿಯಾಗಲು ಕಾರಣವಾಗಿದೆ. ಅತ್ಯಂತ ಚುರುಕಿನ ಯುವಕನಾದ ಈತನು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಾನ್ಸ್, ನಾಟಕ, ಫೋಟೋಗ್ರಫಿಯಲ್ಲಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಕೂಡಾ ಆಸಕ್ತಿ ಹೊಂದಿದವನಾಗಿದ್ದಾನೆ. ಈ ಹಿಂದೆ ಕೂಡಾ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನುಭವ ಹೊಂದಿರುವ ಈತ ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಭಾಗವಸುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಭರವಸೆ ಮೂಡಿಸಿದ ಭಟ್ಕಳ ತಾಲುಕಿನ ಯುವಕ ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಪರಿಚಯಿಸಿದ ಯುವಕ ಇನ್ನೂ ಎತ್ತರಕ್ಕೆ ಬೆಳೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ.

Related posts

Leave a Reply