Header Ads
Header Ads
Breaking News

ಸಾಯಿಲೀಲಾ ವೆಜ್ ರೆಸ್ಟೋರೆಂಟ್ ಬಿ.ಸಿ ರೋಡ್‌ನ ಕೈಕಂಬದಲ್ಲಿ ಉದ್ಘಾಟನೆ.

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪ್ರತಿಷ್ಠಿತ ರಾಜಶ್ರೀ ಗ್ರಾಂಡ್ಯುರ್ ವಾಣಿಜ್ಯ ಸಂಕೀರ್ಣದಲ್ಲಿ ಪ್ರಕಾಶ್ ಬಿ ಹಾಗೂ ಸದಾನಂದ ಬಿ.ಬಂಗೇರಾ ಮಾಲಕತ್ವದ ನೂತನ ಸಾಯಿಲೀಲಾ ವೆಜ್ ರೆಸ್ಟೋರೆಂಟ್ ಗುರುವಾರ ಉದ್ಘಾಟನೆಗೊಂಡಿತು.ಬೆಳಿಗ್ಗೆ ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು ನೂತನ ರೆಸ್ಟೋರೆಂಟನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಇತರ ಉದ್ಯಮಗಳಿಗೆ ಹೋಲಿಸಿದರೆ ಹೊಟೇಲ್ ಉದ್ಯಮ ವಿಭಿನ್ನವಾದುದು. ನಿರಂತರ ಪರಿಶ್ರಮ ಹಾಗೂ ಜಾಗರೂಕತೆಯಿಂದ ನಡೆಸಿದರೆ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು. ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರಾ ಹಾಗೂ ನ್ಯಾಯವಾದಿ ಅಶ್ವನಿ ಕುಮಾರ್ ರೈ ಶುಭಹಾರೈಸಿದರು. ವಿಶ್ವಹಿಂದೂ ಪರಿಷತ್‌ನ ಮುಖಂಡ ಶರಣ್ ಪಂಪ್‌ವೆಲ್, ರಂಗಕಲಾವಿದ ಸದಾಶಿವ ಅಮೀನ್, ಸುರೇಶ್ ಕುಲಾಲ್, ಸತೀಶ್ ಕುಲಾಲ್, ಡಾ. ಬಾಲಕೃಷ್ಣ ಕುಮಾರ್ ಅಗ್ರಬೈಲು ಹಾಗೂ ಹೊಟೇಲ್ ಮಾಲಕರಾದ ಪ್ರಕಾಶ್ ಬಿ. ಹಾಗೂ ಸದಾನಂದ ಬಂಗೇರಾ ಉಪಸ್ಥಿತರಿದ್ದರು.
ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಈ ವೆಜ್ ರೆಸ್ಟೋರೆಂಟ್ ಇದ್ದು ಇಲ್ಲಿನ ಜನರ ಬೇಡಿಕೆಯ ಅನುಗುಣವಾಗಿ ಈ ಹೊಟೇಲ್ ನಿರ್ಮಾಣಗೊಂಡಿದೆ. ಶುಚಿ ರುಚಿಯಾದ ಶುದ್ದ ಸಸ್ಯಹಾರಿ ಊಟ, ಉಪಹಾರ, ಚಾಟ್ ಐಟಮ್, ಪ್ರೂಟ್ ಜ್ಯೂಸ್, ಐಸ್‌ಕ್ರೀಂ ಇಲ್ಲಿ ಲಭ್ಯವಿದೆ.

Related posts

Leave a Reply