Header Ads
Header Ads
Breaking News

ಸಾರಿಗೆ ನಿಯಮ ಗಾಳಿಗೆ ತೂರಿದ ವಾಹನ ಚಾಲಕರು ವಾಹನ ಚಾಲಕರಿಗೆ ಬೆವರಿಳಿಸಿದ ವಿಟ್ಲ ಪೊಲೀಸರು ವಾಹನದ ಮೇಲೆ ಚಾರ್ಜ್ ಮಾಡಿದ ಪೊಲೀಸರು

ವಿಟ್ಲ: ಕಳೆದ ಹಲವು ಸಮಯಗಳಿಂದ ಸಾರಿಗೆ ನಿಯಮ ಹಾಗೂ ಜಿಲ್ಲಾಧಿಕಾರಿಗಳ ಆದೇಶಗಳನ್ನು ಗಾಳಿ ತೂರಿದ ವಾಹನ ಚಾಲಕರಿಗೆ ವಿಟ್ಲ ಪೊಲೀಸರು ಬೆವರು ಇಳಿಸಿದ್ದಾರೆ. ವಿಟ್ಲ ಟ್ರಾಫಿಕ್ ಸಮಸ್ಯೆ ಮುಖ್ಯ ಕಾರಣವಾಗುತ್ತಿದ್ದ ವಾಹನ ಮೇಲೆ ಪೊಲೀಸರು ಸಖಾತ್ ಚಾರ್ಜ್ ಮಾಡಿದ್ದಾರೆ.

ವಿಟ್ಲ ಮುಖ್ಯ ರಸ್ತೆಯಲ್ಲಿ ಯಾವುದೇ ನಿಲ್ಲಿಸಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ವಾಹನ ಚಾಲಕರು ಮಾತ್ರ ಕ್ಯಾರೆ ಅನ್ನುತ್ತಿರಲಿಲ್ಲ. ಪಟ್ಟಣ ಪಂಚಾಯಿತಿ ನೋ ಪಾರ್ಕಿಂಗ್ ನಾಮಫಲಕ ಅಳವಡಿಸಿದ್ದರೂ ಅದರ ಸಮೀಪವೇ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿತ್ತು.

ಕೆಲವು ದಿನಗಳ ಹಿಂದೆ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮಖದಲ್ಲಿ ವಿವಿಧ ವಾಹನಗಳ ಚಾಲಕ-ಮಾಲಕರ ಸಭೆ ಕರೆದು ಪರಿಣಾಮಕಾರಿ ಕಾನೂನು ಜಾರಿ ಮಾಡಲಾಗಿತ್ತು. ಅದರಂತೆ ವಿಟ್ಲ ಎಸೈ ನಾಗರಾಜ್ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿದೆ. ಕಾನೂನು ನಿಯಮಗಳನ್ನು ಗಾಳಿ ತೂರುವ ಹೆಲ್ಮೆಟ್ ಧರಿಸದ, ಸಮರ್ಪಕ ದಾಖಲೆ ಹೊಂದzಲ್ವಾಹನಗಳ ಚಾಲಕರಿಗೆ ಸಖತ್ ದಂಡ ವಿಧಿಸಿದ್ದಾರೆ. ಅದೇ ರೀತಿ ವಾಹನ ನಿಷೇಧಿತ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ ವಾಹನಗಳಿಗೆ ಲಾಕ್ ಅಳವಡಿಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅದು ಕೂಡ ಪಾಲನೆಯಾಗಿರಲಿಲ್ಲ. ಇದೀಗ ಮತ್ತೆ ಪೊಲೀಸರು ವಿಟ್ಲ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಮತ್ತೆ ಕಾರ್ಯಾಚರಣೆ ಇಳಿದಿದ್ದಾರೆ. ಇದು ಎಷ್ಟರಮಟ್ಟಿಗೆ ಯಶಸ್ಸಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.