Header Ads
Breaking News

ಸಾರ್ವಜನಿಕರಿಗಾಗಿ ಸಾರ್ವಜನಿಕರಿಂದಲೇ ಬಸ್ ಸ್ಟ್ಯಾಂಡ್ ನಿರ್ಮಾಣ

ಇದು ಸಾರ್ವಜನಿಕರಿಂದ ಸಾರ್ವಜನಿಕರಿಗೋಸ್ಕರ ನಿರ್ಮಿಸಿದ ಬಸ್ ನಿಲ್ದಾಣ. ಜಾಗ ದಾನದಿಂದ ಹಿಡಿದು ಎಲ್ಲವೂ ಸಾರ್ವಜನಿಕರ ಸಹಾಯದಿಂದ ಈ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದು ಕೊಡುವೂರಿನ ಜೋಡುಕೆರೆ ಬಸ್ ನಿಲ್ದಾಣಕ್ಕೆ ಇಂದು ಚಾಲನೆ ಸಿಕ್ಕಿದೆ.ಕೊಡುವೂರಿನ ಎಲ್ಲಾ ಕಡೆಯಲ್ಲಿ ಬಸ್ ನಿಲ್ದಾಣ ಇದ್ದರೂ ಸಹ ಜೋಡುಕೆರೆಯಲ್ಲಿ ಬಸ್ ನಿಲ್ದಾಣ ಇರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲತೆಗಳಾಗುತ್ತಿತ್ತು. ಇದನ್ನ ಮನಗಂಡ ಇಲ್ಲಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ಸ್ಥಳೀಯರ ಸಹಕಾರದಿಂದ ಬಸ್ ನಿಲ್ಧಾಣಕ್ಕೆ ಮುಂದಾಗಿದ್ದಾರೆ. ಬಸ್ ನಿಲ್ದಾಣಕ್ಕೆ ಬೇಕಾಗುವ ಜಾಗವನ್ನು ರೋನಿ ಫೆನಾರ್ಂಡೀಸ್ ನೀಡಿದ್ದು ಬಳಿಕ ಸಾರ್ವಜನಿಕರ ಸಹಾಯದಿಂದ ಈ ಬಸ್ ನಿಲ್ದಾಣ ಕಾಮಗಾರಿಯನ್ನು ಸುಮಾರು 30 ಸಾವಿರ ವೆಚ್ಚದಲ್ಲಿ ಪೂರ್ಣಗೊಳಿಸಿದ್ದಾರೆ. ಇಂದು ನಡೆದ ಸರಳ ಸಮಾರಂಭದಲ್ಲಿ ಉದ್ಯಮಿ ಆನಂದ್ ಪಿ ಸುವರ್ಣ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.ಬಸ್ ಸ್ಟ್ಯಾಂಡ್ ನಿರ್ಮಾಣದ ಬಗ್ಗೆ ಕೊಡವೂರು ವಾರ್ಡ್ ಸದಸ್ಯ ವಿಜಯ್ ಕೊಡವೂರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ಶೇಷಪ್ಪ ಕುಂದರ್, ವಿಜಯ್ ಬಂಗೇರಾ, ರಾಘವೇಂದ್ರ ರಾವ್, ವಾರ್ಡ್ ಸಮಿತಿಯ ಅದ್ಯಕ್ಷ ಪ್ರಭಾತ್ ಕೊಡವೂರು, ಪ್ರಶಾಂತ್ ಸನಿಲ್, ಅಜಿತ್ ಕೊಡವೂರು, ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *