Breaking News

ಸಾರ್ವಜನಿಕರ ಸಮಸ್ಯೆಗೆ ಶಾಸಕ ಮೋಯಿದೀನ್ ಬಾವ ಸ್ಪಂದನೆ, ಸುರತ್ಕಲ್‌ನಲ್ಲಿ ಸ್ವಂತ ಖರ್ಚಿನಲ್ಲಿ ಬಸ್ಸು ತಂಗುದಾಣ ನಿರ್ಮಾಣ


ಬಸ್ ಸ್ಟಾಂಡ್ ಇಲ್ಲದೆ ಸಾರ್ವಜನಿಕರು ಬಸ್ಸಿಗಾಗಿ ಮಳೆಯಲ್ಲೇ ನೆನೆಯುತ್ತಾ ಕಷ್ಟ ಪಡುತ್ತಿದ್ದನ್ನು ಕಂಡ ಶಾಸಕ ಮೊಹಿದೀನ್ ಬಾವಾ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಎರಡು ಗಂಟೆಯೊಳಗೆ ಬಸ್ ತಂಗುದಾಣ ನಿರ್ಮಿಸಿದ ವಿಶೇಷ ಕಾರ್ಯ ಸುರತ್ಕಲ್ ನಲ್ಲಿ ನಡೆದಿದೆ.
ಸುರತ್ಕಲ್ ಪ್ರದೇಶದಲ್ಲಿ ಇಂದು ತೀವ್ರ ಮಳೆ ಸುರಿಯುತ್ತಿದ್ದು, ಶಾಸಕ ಮೊಹಿದೀನ್ ಬಾವಾ ಅವರು ಸುರತ್ಕಲ್ ಮಾರ್ಕೆಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿ ಮುಂಭಾಗ ಕೃಷ್ಣಾಪುರ ರಸ್ತೆಯಲ್ಲಿ ಸಾಕಷ್ಟು ಪ್ರಯಾಣಿಕರು ಬಸ್ಸಿಗಾಗಿ ಯಾವುದೇ ಆಸರೆಯಿಲ್ಲದೆ ಮಳೆಯಲ್ಲಿಯೇ ನಿಂತಿರುವುದನ್ನು ಕಂಡರು. ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು, ತಾತ್ಕಾಲಿಕ ಬಸ್ ತಂಗುದಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿಗಳು, ತಗಡು, ಜಿಂಕ್ ಶೀಟ್ ಮತ್ತಿತರ ಸಾಮಾಗ್ರಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಖರೀದಿಸಿ, ಅಗತ್ಯ ಕೆಲಸಗಾರರನ್ನೂ ವ್ಯವಸ್ಥೆ ಮಾಡಿ ಬಸ್ ತಂಗುದಾಣ ಕಾಮಗಾರಿ ಆರಂಭಿಸಿಯೇ ಬಿಟ್ಟರು.
ನೋಡ ನೋಡುತ್ತಿದ್ದಂತೆಯೇ ಬಸ್ ತಂಗುದಾಣ ಕಾಮಗಾರಿ ಕ್ಷಿಪ್ರವಾಗಿ ನಡೆದು, ತಂಗುದಾಣ ಸಿದ್ಧಗೊಂಡಿತು. ಉದ್ಘಾಟನೆಯನ್ನೂ ಶಾಸಕರು ನೆರವೇರಿಸಿದರು. ಆ ಮೂಲಕ ಮಳೆಯಲ್ಲಿಯೇ ಬಸ್ಸಿಗಾಗಿ ಕಾಯುತ್ತಿದ್ದ ಸಾರ್ವಜನಿಕರ ಸುದೀರ್ಘ ಸಂಕಷ್ಟಕ್ಕೆ ಶಾಸಕರು ಪರಿಹಾರ ನೀಡಿದರು. ಶಾಸಕರ ಈ ಕ್ಷಿಪ್ರ ಸ್ಪಂದನೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Related posts

Leave a Reply