Header Ads
Header Ads
Breaking News

ಸಾರ್ವಜನಿಕ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನೆ : ಕುಡ್ತಮುಗೇರು ಟಾಫ್ ಆಂಡ್ ಟಾಫ್ ಚಾರಿಟೇಬಲ್ ಟ್ರಸ್ಟ್‌ನ ಕೊಡುಗೆ

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಟಾಫ್ ಆಂಡ್ ಟಾಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನಾ ಸಮಾರಂಭ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಹಿರಿಯರು ಯುವಕರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದಾಗ ಯುವಕರು ದಾರಿ ತಪ್ಪಲು ಸಾಧ್ಯವಿಲ್ಲ. ಯುವಕರನ್ನು ದುರ್ಬಳಕೆ ಮಾಡುವ ಕಾರ್ಯಕ್ರಮಗಳ ಮೂಲಕ ಯುವಕರು ದಾರಿ ತಪ್ಪಲು ಸಾಧ್ಯವಿದೆ. ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡುವ ಯುವಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಆಂಬ್ಯುಲೆನ್ಸ್ ವಾಹನ ಕೀ ಹಸ್ತಾಂರ ಮಾಡಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರು ಹಿಂದಿನ ಕಾಲಘಟ್ಟದಲ್ಲಿ ಆಂಬ್ಯುಲೆನ್ಸ್ ಸೇವೆ ಅತ್ಯಾವಶ್ಯಕವಾಗಿದೆ. ಬಡವರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜೀವನ ಸಾರ್ಥಕತೆ ಆಗುತ್ತದೆ. ಸಹಾಯ ಮಾಡುವ ಮನೋಭಾವ ಹೊಂದಿದವನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದರು.

ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಂಕರ್ ಪಾಟಾಲಿ, ಮಂಗಳೂರು ಎಂಸಿಸಿ ಬ್ಯಾಂಕ್‌ನ ಅನಿಲ್ ಲೋಬೋ, ವಿಟ್ಲ ಎಸೈ ಯಲ್ಲಪ್ಪ, ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕುಡ್ತಮುಗೇರು ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯಾಧಿಕಾರಿ ಡಾ. ಸಮೀಕ್ಷಾ ಆಳ್ವ, ಪ್ರಗತಿಪರ ಕೃಷಿಕ ಚಿತ್ತರಂಜನ್ ಕರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸದಸ್ಯ ಪವಿತ್ರ ಪೂಂಜ, ಸಿ.ಎಚ್ ಅಬೂಬಕ್ಕರ್ ನಾರ್ಶ, ಹರೀಶ್ ಟೈಲರ್, ಟಾಫ್ ಆಂಡ್ ಟಾಫ್ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಅಬ್ಬಾಸ್ ಹಾಜಿ, ಗೌರವ ಸಲಹೆಗಾರ ಹಕೀಂ ಪರ್ತಿಪ್ಪಾಡಿ, ವೇಣುಗೋಪಾಲ್, ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಉಮ್ಮರ್ ಬೊಳ್ಳಚ್ಚಾರು, ಟ್ರಸ್ಟ್‌ನ ಅಧ್ಯಕ್ಷ ನೌಫಲ್ ಕುಡ್ತಮುಗೇರು, ಅನೀಸ್ ಕುಡ್ತಮುಗೇರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply