Header Ads
Header Ads
Breaking News

ಸಾಲದ ದಾಖಲೆಗೆ ಬಿಇಒ ಸಹಿ ಮಾಡಿಲ್ಲ ಎಂಬ ಆರೋಪ ಪುತ್ತೂರು ಕಚೇರಿ ಮುಂದೆ ವಿಕಲಚೇತನ ಶಿಕ್ಷಕನ ಏಕಾಂಗಿ ಪ್ರತಿಭಟನೆ

ಪುತ್ತೂರು : ವೈಯಕ್ತಿತ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ದಾಖಲೆಗೆ ಸಹಿ ಹಾಕಲು ಕ್ಷೇತ್ರ ಶಿಕ್ಷಣಾಧಿಕಾರಿ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಕೋಟಾದಡಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ಶಿಕ್ಷಕರೊಬ್ಬರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ನಿಂತುಕೊಂಡು ಏಕಾಂಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಶಿಕ್ಷಕರಾಗಿದ್ದು, ಪ್ರಸ್ತುತ ನಿಯೋಜನೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಶಿವಪ್ಪ ರಾಥೋಡ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯ ನಿಲುವಿನ ವಿರುದ್ದ ಆಕ್ರೋಶ ತೋಡಿಕೊಂಡಿದ್ದಾರೆ.
ತಾನು ಈ ಹಿಂದೆಯೂ ಎರಡು ಬಾರಿ ವೈಯಕ್ತಿಕವಾಗಿ ಬ್ಯಾಂಕ್ ಸಾಲ ಪಡೆದಿದ್ದು, ನಿಗದಿತ ಸಮಯದಲ್ಲಿ ಸಾಲದ ಕಂತು ಪಾವತಿಸಿದ್ದೇನೆ.ಸಾಲ ಮರುಪಾವತಿಸುವ ವಿಚಾರದಲ್ಲಿ ಯಾವುದೇ ಲೋಪ ಎಸಗಿಲ್ಲ. ಇದೀಗ ಮನೆಯಲ್ಲಿ ಅಡಚಣೆಯಿರುವ ಕಾರಣ ಮತ್ತೆ ಸ್ಟೇಟ್ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಪೇಡ್ರಾಯಿಂಗ್ ಅಧಿಕಾರಿಯ ಸಹಿ ದಾಖಲಾತಿ ನೀಡಿದಲ್ಲಿ ಶೇ.1 ರಿಬೇಟ್ ಕೊಡುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ತಾನು ಬ್ಯಾಂಕ್ ಸಾಲದ ಸಹಿಗಾಗಿ ಗುರುವಾರ ಮಧ್ಯಾಹ್ನ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಅವರಲ್ಲಿ ಮನವಿ ಮಾಡಿಕೊಂಡಿದ್ದರೂ ಸಹಿ ಮಾಡಲು ಅವರು ನಿರಾಕರಿಸಿದ್ದಾರೆ, ಸಂಜೆ ತನಕ ಕಾದು ಕುಳಿತರೂ ಅವರು ಸಹಿ ಮಾಡಿಲ್ಲ ಎಂದು ಶಿವಪ್ಪ ರಾಥೋಡ್ ಅವರು ಆರೋಪಿಸಿದ್ದಾರೆ.
ವರದಿ: ಅನೀಶ್ ಪುತ್ತೂರು