Header Ads
Header Ads
Breaking News

ಸಾಲಮನ್ನಾವನ್ನು ಅನರ್ಹರು ದುರುಪಯೋಗ ಮಾಡಬಾರದು ವಿಟ್ಲದಲ್ಲಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿಕೆ!

ವಿಟ್ಲ: ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಆತ್ಮಹತ್ಯಾ ದಾರಿ ಹಿಡಿದ ಕಷ್ಟಕಾಲದಲ್ಲಿ ಕರ್ನಾಟಕ ಸರ್ಕಾರ ರೈತರ ಸಾಲಮನ್ನ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಸಾಲಮನ್ನಾವನ್ನು ಅನರ್ಹರು ದುರುಪಯೋಗ ಮಾಡಬಾರದೆಂಬ ಕಾರಣದಿಂದ ಮಾಡಿದ ಶರ್ತದಲ್ಲಿ ಜನಪ್ರತಿನಿಧಿಗಳನ್ನು ಸೇರಿಸಿರುವುದು ಅವೈಜ್ಞಾನಿಕವಾದುದು ಎಂದು ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಆಗ್ರಹಿಸಿದರು.ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾಯಿತ ಜನಪ್ರತಿನಿಧಿಗಳ ಪೈಕಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗುತ್ತದೆ.

 ಶಾಸಕರಿಗೆ ಹಾಗೂ ಸಂಸದರಿಗೆ ವೇತನ ವ್ಯವಸ್ಥೆ ಇದ್ದು, ಬತ್ಯೆಗಳು ಪ್ರತ್ಯೇಕವಾಗಿ ನೀಡಲಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಕನಿಷ್ಠ ಗೌರವಧನವನ್ನು ಪಡೆದು ಗ್ರಾಮೀಣ ಪ್ರದೇಶದಲ್ಲಿ ಓಡಾಡಿಕೊಂಡು ಜನ ಸೇವೆಯನ್ನು ನಡೆಸುತ್ತಿದ್ದಾರೆ. ಮೀಸಲಾತಿ ಆಧಾರದಲ್ಲಿ ಸ್ಪರ್ದಿಸಿ ಚುನಾಯಿತರಾಗಿರುವವರಲ್ಲಿ ಬಡ ವರ್ಗದವರೇ ಹೆಚ್ಚಾಗಿದ್ದು, ಸಾಮಾನ್ಯ ವರ್ಗದವರು ಕೃಷಿ ಕುಟುಂಬಕ್ಕೆ ಸೇರಿದವೇ ಆಗಿದ್ದಾರೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಉಪಸ್ಥಿತರಿದ್ದರು.

Related posts

Leave a Reply