Header Ads
Header Ads
Breaking News

ಸಾಲಮನ್ನಾ ಸರ್ಕಾರದ ಯೋಜನೆ ಸದಸ್ಯ ರೈತರಿಗೆ ಒದಗಿಸಲು ವಿಳಂಬ ಧೋರಣೆ : ರೈತ ಸಂಘದಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು ಘಟಕ ಹಾಗೂ ಅರಂತೋಡು ವಲಯ ಘಟಕ ಇದರ ವತಿಯಿಂದ ಅರಂತೋಡು ಸೇವಾ ಸಹಕಾರಿ ಸಂಘದ ಎದುರುಗಡೆ ಸಾಲಮನ್ನಾ ಸರ್ಕಾರದ ಯೋಜನೆಯನ್ನು ಸದಸ್ಯ ರೈತರಿಗೆ ಒದಗಿಸಿ ಕೊಡಲು ವಿಳಂಬ ಮಾಡಿರುವುದರ ವಿರುದ್ಧ ಪ್ರತಿಭಟನೆ ಹಾಗೂ ಧರಣಿ ನಡೆಯಿತು.

ಕರ್ಣಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಹಮ್ಮಿಕೊಂಡ ಸಾಲಮನ್ನಾ ವಿಚಾರವಾಗಿ ಅರಂತೋಡು ಸಹಕಾರಿ ಸಂಘ ಮುಂಭಾಗದಲ್ಲಿ ಪ್ರತಿಭಟನೆ ನಡಿಯುತ್ತಿದೆ. ವಲಯ ಸಹಕಾರಿ ಸೂಪರ್‌ವೈಸರ್ ಬಾಲಕೃಷ್ಣ ಅವರು ಕೊಟ್ಟ ಭರವಸೆಗೆ ರೈತರು ಒಪ್ಪದೇ ಜಿಲ್ಲಾ ರಿಜಿಸ್ಟ್ರಾರ್ ಅವರೇ ಬಂದು ಸೂಕ್ತ ಭರವಸೆ ನೀಡುವ ತನಕ ಅಹೋರಾತ್ರಿ ಧರಣಿ ಮಾಡಲಾಗುವುದೆಂದು ತೀರ್ಮಾನಿಸಿದ್ದಾರೆ. ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರೈತಸಂಘ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲೊಲಜಾಕ್ಷ ಭೂತಕಲ್ಲು, ಪ್ರಧಾನ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು, ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ ಮಜಿಗುಂಡಿ, ಖಜಾಂಜಿ ದೇವಪ್ಪ ಕುಂಡಲಪಾಡಿ, ಅರಂತೋಡು ವಲಯ ಅಧ್ಯಕ್ಷ ತೀರ್ಥರಮ ಉಳುವಾರು, ಕಾರ್ಯದರ್ಶಿ ಮೋಹನ್ ಅಡತ್ತಲೆ, ಅರಂತೋಡು, ಅಲೆಟ್ಟಿ ಉಬರಡ್ಕ, ಮಡಪ್ಪಾಡಿ ಜಾಲ್ಸೂರ್, ಅಜ್ಜಾವರ ಮುಂತಾದ ಗ್ರಾಮಗಳ ರೈತರು ಧರಣಿಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *