Header Ads
Header Ads
Header Ads
Breaking News

ಸಾಲಮನ್ನಾ ಹಣ ಪಾವತಿಸದ ವಾಣಿಜ್ಯ ಬ್ಯಾಂಕ್‌ಗಳು : ಮಲೆನಾಡು ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಪುತ್ತೂರು: ಸಾಲಮನ್ನಾ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಗೆ ಬಂದಿರುವ ಹಣವನ್ನು ಜಿಲ್ಲಾ ಸಹಕಾರಿ ಬ್ಯಾಂಕ್, ಸಹಕಾರಿ ಸಂಘಗಳು, ವಾಣಿಜ್ಯ ಬ್ಯಾಂಕ್‌ಗಳು ಸರಿಯಾಗಿ ಪಾವತಿಸದೆ ವಂಚನೆ ನಡೆಸುತ್ತಿದ್ದು, ಇದರ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಅವರು ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರೈತರ ಬೆಳೆ ಸಾಲ ಮನ್ನಾ ಯೋಜನೆ ಜಾರಿಗೆ ಬಂದು ಒಂದೂವರೆ ವರ್ಷಗಳು ಕಳೆದರೂ ಈ ತನಕ ಸುಮಾರು ರೈತರಿಗೆ ಶೆ. ೫೫ ಮಾತ್ರ ಪಾವತಿಯಾಗಿದೆ. ಶೆ.೪೫ರಷ್ಟು ಹಣವು ಇನ್ನೂ ಪಾವತಿಯಾಗಲು ಬಾಕಿಯಾಗಿದೆ. ಕೆಲವು ಬ್ಯಾಂಕ್‌ಗಳು ಒಂದು ರೂಪಾಯಿಯನ್ನೂ ನೀಡದೆ ವಂಚನೆ ನಡೆಸುತ್ತಿದೆ. ಈಗಾಗಲೇ ರೈತರು ಕಾಡು ಪ್ರಾಣಿಗಳ ಹಾವಳಿ, ಪ್ರಕೃತಿ ವಿಕೋಪ, ಕೃಷಿ ಉತ್ಪಾಧನೆಗೆ ಮಾರುಕಟ್ಟೆಗಳಿಲ್ಲದೆ ಕಂಗಾಲಾಗಿದ್ದಾರೆ ಈ ನಡುವೆ ಬ್ಯಾಂಕ್‌ಗಳೂ ವಂಚನೆ ನಡೆಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸದಸ್ಯರಾದ ಪ್ರಕಾಶ್ ಗುಂಡ್ಯ, ಮಾರ್ಕೋಸ್ ಅಡ್ಡೊಳೆ, ಜಯರಾಮ ಕಟ್ಟೆಪುಣಿ ಮತ್ತು ತೋಮಸ್ ಎನ್.ಪಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *