Header Ads
Header Ads
Header Ads
Breaking News

ಸಾಲಮೇಳದ ಸಂಗ್ರಾಮ ಕುದ್ರೋಳಿ ದೇವರಿಗೆ ಅರ್ಪಣೆ ತನ್ನ ಆತ್ಮಚರಿತ್ರೆ ಅರ್ಪಿಸಿದ ಜನಾರ್ದನ ಪೂಜಾರಿ ತಲೆ ಮೇಲೆ ಇಟ್ಟುಕೊಂಡು ತಂದ ಹಿರಿಯ ಕಾಂಗ್ರೆಸ್ಸಿಗ

 ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆತ್ಮಕಥೆ ಸಾಲಮೇಳದ ಸಂಗ್ರಾಮವನ್ನು ಸ್ವತಃ ಪೂಜಾರಿಯವರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಲೋಕಾರ್ಪಣೆಗೊಳಿಸಿದರು. ತಮ್ಮ ಅಪ್ತರು , ಅಭಿಮಾನಿಗಳ ಜತೆಗೆ ಬ್ಯಾಂಡು ವಾಲಗದೊಂದಿಗೆ ಕ್ಷೇತ್ರದ ಗರ್ಭಗುಡಿಗೆ ಆಗಮಿಸಿದ ಪೂಜಾರಿಯವರು ಆತ್ಮಕಥೆ ಪ್ರತಿಗಳನ್ನು ದೇವರ ವಿಗ್ರಹದ ಮುಂದಿರಿಸಿ ಪೂಜೆ ಸಲ್ಲಿಸಿದರು. ತೀರ್ಥ ಸಂಪ್ರೋಕ್ಷಣೆ ನಡೆಸಿದ ಪುಸ್ತಕವನ್ನು ಸ್ವತಃ ತಾಲೇ ತಲೆಯ ಮೇಲಿರಿಸಿ ಪ್ರದಕ್ಷಿಣೆ ನಡೆಸಿ ವೇದಿಕೆಗೆ ಆಗಮಿಸಿದರು. ಬಳಿಕ ಪುಸ್ತಕ ಬಿಡುಗಡೆ ನಡೆಯಿತು.

ಈ ಸಂದರ್ಭದಲ್ಲಿ ಸಚಿವ ರಮಾನಾಥ್ ರೈ, ಸಚಿವ ಯು.ಟಿ.ಖಾದರ್ , ಮೇಯರ್ ಕವಿತಾ ಸನಿಲ್, ಪಾಲಿಕೆ ಮುಖ್ಯ ಸಚೇತಕ ಐವನ್ ಡಿಸೋಜಾ, ಆರ್‌ಎಸ್.ಎಸ್.ಮುಖಂಡ ಡಾ|ಕಲ್ಲಡ್ಕ ಪ್ರಭಾಕರ್ ಭಟ್, ಶಾಸಕರಾದ ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಮೊದೀನ್ ಬಾವಾ, ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮತ್ತಿತರರು ಉಪಸ್ಥಿತಿರಿದ್ದರು.

Related posts

Leave a Reply