Header Ads
Header Ads
Header Ads
Breaking News

ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಮತ್ಸ್ಯ ಕಂಟಕ ಒಂದು ಮುಗಿಯೋಷ್ಟರಲ್ಲಿ ಮತ್ತೊಂದು ರಗಳೆ ಶುರು ಮಹಿಳೆಯರ ಆಕ್ರೋಶಕ್ಕೆ ಅಡಕತ್ತರಿಯಲ್ಲಿ ಸಿಲುಕಿದ ಪಂಚಾಯತ್

ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಮತ್ತೇ ಮತ್ಸ ಕಂಟಕ ಎದುರಾಗಿದೆ. ಈ ಹಿಂದೆ ಅನಧಿಕೃತ ಮೀನು ಮಾರಾಟ ಮಳಿಗೆ ಆರಂಭವಾಗಿ ಪ್ರತಿಭಟನೆ ನಡೆದ ಘಟನೆ ಮಾಸುವ ಮುನ್ನವೇ, ಇನ್ನೊಂದು ಖಾಸಗಿ ಕಟ್ಟಡವೊಂದರಲ್ಲಿ ಹಸಿ ಮೀನು ಮಾರಾಟ ಮಳಿಗೆ ಆರಂಭಗೊಂಡಿರುವುದು ಸ್ಥಳೀಯ ಮೀನುಮಾರುಕಟ್ಟೆಯ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ಪಟ್ಟಣ ಪಂಚಾಯತ್‌ನ್ನ ಅಡಕತ್ತರಿಯಲ್ಲಿ ಸಿಲುಕಿಸಿದೆ.

ಮಂಗಳವಾರ ಮೀನು ಮಾರಾಟ ಮಹಿಳೆಯರು ನೂತನವಾಗಿ ಆರಂಭಗೊಂಡ ಮೀನು ಮಾರಾಟ ಮಳಿಗೆ ಮುಂದೆ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುವ ಮೂಲಕ ಪ್ರತಿಭಟಿಸಿದ್ದರು. ಬುಧವಾರ ಕೂಡ ಇದೇ ಸ್ಥಳದಲ್ಲಿ ಮೀನು ಮಾರಾಟ ಮುಂದುವರಿದಿದೆ.

ಬಸ್ ನಿಲ್ದಾಣದ ಬಳಿ ತೆರೆದ ಮೀನು ಮಾರುಕಟ್ಟೆ ನಿರ್ಮಾಣಗೊಂಡಿರುವುದು ಸ್ಥಳದಲ್ಲಿ ಮೀನು ನೀರು ಬಿದ್ದು ಸ್ಥಳ ಮಾಲಿನ್ಯಗೊಳ್ಳುತ್ತಿರುವುದನ್ನ ಮನಗಂಡ ಪಟ್ಟಣ ಪಂಚಾಯತ್ ಮೀನು ಮಾರಾಟ ಮಹಿಳೆಯರು ಮತ್ತು ಅಂಗಡಿ ಮಾಲೀಕರನ್ನ ಕರೆಯಿಸಿ ಪ.ಪಂ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ನೇತೃತ್ವದಲ್ಲಿ ಮಾತುಕತೆಗೆ ಯತ್ನ ನಡೆಸಿದ್ದು ಮೀನು ಮಾರಾಟ ಮಹಿಳೆಯರು ಅಂಗಡಿ ತೆರವುಗೊಳಿಸುವ ತನಕ ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಕದಲುವುದಿಲ್ಲ.ಈ ಅಂಗಡಿಯ ಮಾಲೀಕರು ಪಟ್ಟಣಪಂಚಾಯತ್‌ನ ಅಧಿಕೃತ ಮೀನು ಮಾರುಕಟ್ಟೆಗೆ ತಂದು ಮಾರಾಟ ಮಾಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಮೀನು ಮಾರಾಟ ಮಳಿಗೆ ಆರಂಭಕ್ಕೆ ನಮ್ಮ ವಿರೋಧವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಂಗಡಿ ಮಾಲೀಕ ತಾನು ಅರ್ಧ ದಿನ ಮಾತ್ರ ಇಲ್ಲಿ ವ್ಯಾಪಾರ ನಡೆಸುತ್ತೇನೆ ನಿಮಗೆ ವ್ಯಾಪಾರ ನಡೆಯುವುದು ಸಂಜೆ ವೇಳೆಯಾದ್ದರಿಂದ ನಾನು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ವ್ಯಾಪಾರ ಮಾಡುವುದಾಗಿ ಮಾತುಕತೆ ಸಂದರ್ಭ ಅಂಗಡಿ ಮಾಲೀಕ ಮೀನು ಮಾರಾಟ ಮಹಿಳೆಯರಿಗೆ ತಿಳಿಸಿದ. ಇದಕ್ಕೂ ಒಪ್ಪದ ಮಹಿಳೆಯರು ನಿಮ್ಮ ಯಾವುದೇ ಕರಾರಿಗೂ ನಾವು ತಯಾರಿಲ್ಲ ಮೀನು ಮಾರುಕಟ್ಟೆ ಸಮೀಪ ಯಾವುದೇ ಕಾರಣಕ್ಕೂ ಹಸಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಯಾವುದೇ ಮಾತುಕತೆಗೂ ಮಹಿಳೆಯರು ಸಿದ್ದರಿಲ್ಲದ ಕಾರಣ ಮೋಗವೀರ ಮುಖಂಡರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವಂತೆ ಅಧ್ಯಕ್ಷರು ಸೂಚಿಸಿದರು.
ಪಟ್ಟಣ ಪಂಚಾಯತ್ ವತಿಯಿಂದ ನಡೆಸಲಾಗುತ್ತಿರುವ ಅಧಿಕೃತ ಮೀನು ಮಾರುಕಟ್ಟೆಯಲ್ಲಿ ಮೀನಿನ ಗುಣಮಟ್ಟದ ಬಗ್ಗೆ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇಲ್ಲಿ ದೊರಕುವ ಮೀನುಗಳಲ್ಲಿ ಮೂರರಲ್ಲಿ ಒಂದು ಹಾಳಾಗಿದ್ದನ್ನ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ನೂತನ ಹಸಿ ಮೀನು ಮಾರಾಟ ಮಳಿಗೆ ಬಂದ ಕಾರಣ ಉತ್ತಮ ಗುಣಮಟ್ಟದ ಮೀನು ದೊರಕುತ್ತಿದೆ. ಮೀನು ಮಾರಾಟ ಮಹಿಳೆಯರು ಗುಣಮಟ್ಟದ ಮೀನು ನೀಡುತ್ತಿಲ್ಲ ಮತ್ತು ಗುಣಮಟ್ಟದ ಮೀನು ನೀಡುವ ಮಳಿಗೆ ಬರುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಕೆಲ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದರು.

ವರದಿ: ಹರೀಶ್ ಕಿರಣ್ ತುಂಗಾ ಕುಂದಾಪುರ

Related posts

Leave a Reply