Header Ads
Header Ads
Header Ads
Breaking News

ಸಾಲಿಗ್ರಾಮ ಹಸಿ ಮೀನು ಮಾರಾಟ ಮಳಿಗೆ ವಿವಾದ ಕೊನೆಗೂ ಮುಕ್ತಿಕಂಡ ಮೀನುಗಾರ ಮಹಿಳಾ ಪ್ರತಿಭಟನೆ ಮುಖ್ಯಾಧಿಕಾರಿಗಳಿಂದ ಅಂಗಡಿ ಮಾಲೀಕರಿಗೆ ಎಚ್ಚರಿಕೆ

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಲೆ ಎತ್ತಿದ್ದ ಹಸಿ ಮೀನು ಮಾರಾಟ ಮಳಿಗೆ ವಿರುದ್ಧ ಮೀನುಗಾರ ಮಹಿಳೆಯರ ಪ್ರತಿಭಟನೆ ಕೊನೆಗೂ ಮುಕ್ತಾಯ ಕಂಡಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಮೀನುಗಾರ ಮಹಿಳೆಯರ ಮತ್ತು ಅಂಗಡಿ ಮಾಲೀಕರ ನಡುವಿನ ಸಮರದಿಂದ ಬೇಸತ್ತಿದ್ದ ಪಟ್ಟಣಪಂಚಾಯತ್ ಇಂದು ದಿಟ್ಟ ನಿರ್ಧಾರವನ್ನ ತೆಗೆದುಕೊಂಡು ಸ್ಥಳದಿಂದ ಖಾಲಿ ಮಾಡುವಂತೆ ನೋಟಿಸ್ ಜಾರಿಗೊಳಿಸಿ ತೆರವುಗೊಳಿಸಿದೆ.

ನೀವು ಇಲ್ಲಿ ಅಂಗಡಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಈ ಹಿನ್ನೆಲೆ ಇಲ್ಲಿ ಅಂಗಡಿ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಾಧಿಕಾರಿಗಳು ಪ.ಪಂ ಮುಖ್ಯಾಧಿಕಾರಿ ಕೋಟ ಠಾಣಾ ಪೊಲೀಸರ ಮುಖಾಂತರ ಅಂಗಡಿ ಮಾಲೀಕರಿಗೆ ಸ್ಪಷ್ಟಪಡಿಸಿದರು.

ಒಂದು ವೇಳೆ ಪಂಚಾಯತ್ ಅನುಮತಿ ಇಲ್ಲದೆ ಅಂಗಡಿಯನ್ನ ಪುನಃ ಆರಂಭಗೊಳಿಸಿದ್ದೇ ಆದ್ದಲ್ಲಿ ನಾವು ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿ ಅಂಗಡಿಯನ್ನ ಸಿಜ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವರದಿ: ಹರೀಶ್ ಕಿರಣ್ ತುಂಗಾ, ಕುಂದಾಪುರ

Related posts

Leave a Reply