Header Ads
Header Ads
Breaking News

ಸಾಲೆತ್ತೂರು:ಜ.27ರ ಭಾನುವಾರ ಅಂತರ್ ರಾಜು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ.

ವಿಟ್ಲ: ಕೊಳ್ನಾಡು-ಸಾಲೆತ್ತೂರು ಸದಾಶಿವ ಕೃಪಾ ಸ್ಪೋಟ್ಸ್ ಕ್ಲಬ್ ವತಿಯಿಂದ ಜ.27ರ ಭಾನುವಾರ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಸಾಲೆತ್ತೂರು ಮೈದಾನದಲ್ಲಿ ಜರಗಲಿದೆ ಎಂದು ಸಾಲೆತ್ತೂರು ಸದಾಶಿವ ಕೃಪಾ ಸ್ಪೋಟ್ಸ್ ಕ್ಲಬ್‌ನ ಕಾರ್ಯದರ್ಶಿ ರಮೇಶ್ ಶೆಟ್ಟಿ ಕಾರಾಜೆ ತಿಳಿಸಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ (ಶಿಕ್ಷಣ ಕ್ಷೇತ್ರ) ಹಾಜಿ ಎನ್. ಸುಲೈಮಾನ್ ನಾರ್ಶ ಮತ್ತು ನಿವೃತ್ತ ಮೆಸ್ಕಾಂ ಉದ್ಯೋಗಿ ಎಂ ಶಿವಪ್ಪ ಕುತ್ತಾರು ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲ್, ಕೆಎಸ್‌ಎಲ್‌ಇ.ಸಿ.ಎಯ ರಮೇಶ್ ಆರ್.ಆರ್, ಜಿಲ್ಲಾಧ್ಯಕ್ಷ ಶಿವಕುಮಾರ್ ಪೈಲೂರು, ಉರ್ಬಾನ್ ಪಿಂಟೋ, ಉದ್ಯಮಿಗಳಾದ ಮಾಧವ ಮಾವೆ, ಲಯನ್ ಮನೋರಂಜನ್ ಕರೈ, ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಉದ್ಯಮಿಗಳಾದ ಮಹಮ್ಮದ್ ಮುಸ್ತಫ, ಬಿ.ಜೆ.ಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕ್ಲಬ್‌ನ ಅಧ್ಯಕ್ಷ ಲಕ್ಷ್ಮಣ ಸಪಲ್ಯ ಕಾಡುಮಠ, ಕೋಶಾಧಿಕಾರಿ ಜಗದೀಶ ಶೆಟ್ಟಿ ನಂದ್ರಬೈಲು, ರಾಜಾರಾಮ ಹೆಗ್ಡೆ ಕುದ್ರಿಯ, ಬಿ.ಜೆಪಿ. ಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.

 

 

Related posts

Leave a Reply