Header Ads
Header Ads
Breaking News

ಸಾವಯವ ಕೃಷಿ ಅಧ್ಯಯನ ಪಠ್ಯಪುಸ್ತಕ ಬಿಡುಗಡೆ

ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ 5ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜೀವನ ಶಿಕ್ಷಣದ ಅಂಗವಾಗಿ ನೂತನವಾಗಿ ಪರಿಚಯಿಸುತ್ತಿರುವ ಸಾವಯವ ಕೃಷಿ ಅಧ್ಯಯನ ಪಠ್ಯಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಇಂದಿನಿಂದಲೇ ಪಣ ತೊಡುವ ಮೂಲಕ ಸ್ವಚ್ಛ ಭಾರತದ ರಾಯಭಾರಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

   

ಸಕಟ ಸೀಡ್ಸ್ ಇಂಡಿಯಾ ಪ್ರೈ. ಲಿ. ಕೃಷಿ ವಿeನಿ ಸರಸ್ವತಿ ನಾಗೇಶ್ ಮಾತನಾಡಿ ಪರಿಸರ ದಿನಾಚರಣೆ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿದ್ದು, ಇದು ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗದೆ ನಮ್ಮ ದೈನಂದಿನ ಜೀವನದಲ್ಲಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ನೇತ್ರ ಕ್ರಾಪ್ ಸೈನ್ಸ್ ಪ್ರೈ.ಲಿ. ಕೃಷಿ ವಿeನಿ ಪ್ರಖ್ಯಾತ್ ಕುಮಾರ್ ಕೆ.ವಿ., ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾರದಾ ವಿದ್ಯಾನಿಕೇತನದ ಮುಖ್ಯ ಆಡಳಿತಾಽಕಾರಿ ವಿವೇಕ್ ತಂತ್ರಿ, ಪ್ರಾಂಶುಪಾಲೆ ಸುಷ್ಮಾ ದಿನಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ ಬಿ.ಜಿ., ಉಪ ಪ್ರಾಂಶುಪಾಲ ಮೋಹನದಾಸ್, ಡೇಸ್ಕೂಲ್‌ನ ಪ್ರಾಂಶುಪಾಲೆ ಲತಾ ರೈ ಉಪಸ್ಥಿತರಿದ್ದರು.

Related posts

Leave a Reply