Header Ads
Header Ads
Header Ads
Breaking News

ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಕೇಂದ್ರ ನ.27 ರಂದು ಎನಿಶಿಯಂಟ್ ಫುಡ್ ಬಜಾರ್ ಉದ್ಘಾಟನೆ ಸುರತ್ಕಲ್‌ನ ಶ್ರೀ ತಾರಾ ಟವರ್‍ಸ್‌ನಲ್ಲಿ ಶುಭಾರಂಭ

 

 

ಸುರತ್ಕಲ್‌ನ ಶ್ರೀ ತಾರಾ ಟವರ್‍ಸ್‌ನಲ್ಲಿ ಎನಿಶಿಯಂಟ್ ಫುಡ್ ಬಝಾರ್ ಎಂಬ ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಮಳಿಗೆ ಆರಂಭಗೊಳ್ಳಲಿದೆ ಎಂದು ಏನಿಶಿಯಂಟ್ ಫುಡ್ ಬಝಾರ್‌ನ ಮಾಲಕರಾದ ಪಿ.ಎಚ್. ಎಂ. ರಫೀಕ್ ತಿಳಿಸಿದರು.

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಆರೋಗ್ಯ ಭಾಗ್ಯ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ನ.27 ರಂದು ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಕೇಂದ್ರವನ್ನು ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈಶ್ವರ್ ತೀರ್ಥ ಕೊಡ್ಲಿಗೆರೆ ಭದ್ರಾವತಿ ನಡೆಸಿಕೊಡಲಿದು, ಡಾ. ಸೀಲಾ ಬಾದಾಮಿಯವರು ಪ್ರತೀದಿನ ನಾವು ತಿನ್ನುವುದು ಆಹಾರವೋ, ವಿಷವೋ ಎಂಬುದರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಸಾವಯುವ ಕೃಷಿ ಪ್ರಾದೇಶಿಕ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅನಿಲ್ ರಾಜ್ ಡಿ.ಎಂ. ಉದ್ಘಾಟಿಸಲಿದ್ದಾರೆ. ಶಾಸಕ ಮೊಯ್ದಿನ್ ಬಾವಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸಾವಯುವ ಕೃಷಿ ಪ್ರಾದೇಶಿಕ ಸಹಕಾರಿ ಸಂಸ್ಥೆಯ ಗುಣಶೇಖರ ಶೆಟ್ಟಿ ಮತ್ತಿತ್ತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply