Header Ads
Breaking News

ಸಾವಿರ ಕಂಬದ ಬಸದಿಗೆ ಚುನಾವಣಾ ಆಯೋಗದ ಕಮೀಷನರ್ ಭೇಟಿ

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಮೂಡುಬಿದಿರೆ ಸಾವಿರ ಕಂಬದ ಬಸದಿ ಭಾರತದ ಚುನಾವಣೆ ಆಯೋಗದ ಕಮೀಷನರ್ ಅಶೋಕ್ ಲಾವಸ ದಂಪತಿ ಭೇಟಿ ನೀಡಿ, ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು. 

ಭಟ್ಟಾರಕಶ್ರೀ ಶಿಲ್ಪಕಲೆ, ಬಸದಿಯ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು. ಅಶೋಕ್ ಲಾವಸ ದಂಪತಿಯನ್ನು ಜೈನಮಠದಲ್ಲಿ ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *