Header Ads
Header Ads
Header Ads
Breaking News

ಸಾವಿರ ಕಂಬದ ಬಸದಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಮೊದಲ ಬಾರಿಗೆ ಪ್ರದರ್ಶನಕ್ಕೆ ನೋಡುಗರ ಶ್ಲಾಘನೆ

ಮೂಡುಬಿದಿರೆಯ ಜೈನಮಠದ ಧವಳತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಆಳ್ವಾಸ್ ಸಾಂಸ್ಕೃತಿಕ ವೈಭವವು ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಚೆನ್ನ ಬೈರಾದೇವಿ ಮಂಟಪದಲ್ಲಿ ನಡೆಯಿತು. ಜೈನಮಠದ ಮಠಾಧೀಶ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಿದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ. ಸಹಿತ ಗಣ್ಯರು, ಪ್ರವಾಸಿಗಳು ಉಪಸ್ಥಿತರಿದ್ದರು. ನೂರೈವತ್ತು ವಿದ್ಯಾರ್ಥಿ ಕಲಾವಿದರು ಚೆನ್ನ ಬೈರಾದೇವಿ ಮಂಟಪದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ನೀಡಿದ್ದು, ನೋಡುಗರ ಶ್ಲಾಘನೆಗೆ ಪಾತ್ರವಾಯಿತು.

Related posts

Leave a Reply